ಸಿನಿಮಾ ಕಲಾವಿದರು ಉಪಯೋಗಿಸುವ ವ್ಯಾನಿಟಿ ವ್ಯಾನ್ ಅನ್ನು ಭಾರತಕ್ಕೆ ಪರಿಚಯಿಸಿದವರು ನಟಿ ಪೂನಮ್ ದಿಲ್ಲಾನ್. ಲಾಸ್ ಏಂಜಲೀಸ್ ನಲ್ಲಿ ಜಗ್ ಮೋಹನ್ ಮುಂಡ್ರಾ ಅವರ ‘ಸೋಹ್ನಿ ಮೆಹ್ವಾಲ್’ ಚಿತ್ರದ ಸೆಟ್ ಗೆ ಹೋಗಿದ್ದ ಪೂನಮ್ ವ್ಯಾನಿಟಿ ವ್ಯಾನನ್ನು ನೋಡಿ ಬಹಳ ಮೋಹಗೊಂಡರು.ನಮ್ಮಲ್ಲೂ ಯಾಕೆ ಇದು ಇರಬಾರದು ಎಂಬ ಯೋಚನೆ ಮೂಡಿತು.ಜೆ.ಟ್ರಾವೆಲ್ಸ್ ಜೊತೆ ಸೇರಿ ಇಂತಹ 25 ವ್ಯಾನಿಟಿ ವ್ಯಾನ್ ಗಳನ್ನು ತಯಾರಿಸಿ ಬಾಡಿಗೆಗೆ ಇಟ್ಟರು.ತಮ್ಮ ಕಂಪನಿಗೆ ವ್ಯಾನಿಟಿ ಎಂಬ ಹೆಸರಿಟ್ಟರು.ಆದ್ದರಿಂದ ಇಂತಹ ವ್ಯಾನ್ ಗಳು ವ್ಯಾನಿಟಿ ವ್ಯಾನ್ ಎಂದೇ ಹೆಸರಾಯಿತು.ನಿರ್ಮಾಪಕರಿಗೆ ಇದು ಇಷ್ಟವಾಗಲಿಲ್ಲ. ಓರ್ವ ನಿರ್ಮಾಪಕ ಬಾಡಿಗೆಗೆ ತೆಗೆದುಕೊಂಡರು.ನಂತರ ಕ್ರಮೇಣ ಸಿನಿಮಾ ಕಲಾವಿದರಿಗೆ ಇದರ ಅಗತ್ಯ ಮನವರಿಕೆಯಾಯಿತು. ಸರ್ವ ಸೌಕರ್ಯಗಳನ್ನು ಒಳಗೊಂಡಿರುವ ವ್ಯಾನ್ ಗಳನ್ನು ಹೀರೋ ಹೀರೋಯಿನ್ ಗಳು ಸ್ವಂತದ್ದಾಗಿ ಇಟ್ಟುಕೊಳ್ಳತೊಡಗಿದರು.ಇದಕ್ಕಾಗಿ ನಿರ್ಮಾಪಕರಿಂದ ಬಾಡಿಗೆಯನ್ನೂ ವಸೂಲು ಮಾಡುವವರೂ ಇದ್ದಾರೆ.
ಏಳಿಂಜೆ ನಾಗೇಶ್ (98929 80750)









































