ಕಾರ್ಕಳ : ಎಂಪಿಎಂಸಿ ಸದಸ್ಯ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಜೆರಾಲ್ಡ್ ಡಿʼಸಿಲ್ವಾ ಆ. 29ರಂದು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಶಾಸಕರ ಕಚೇರಿ ವಿಕಾಸದಲ್ಲಿ ಜೇರಾಲ್ಡ್ ಡಿ ಸಿಲ್ವಾ ಹಾಗೂ ಕ್ಯಾಥೋಲಿಕ್ ಸಭಾ ಮಾಜಿ ಅಧ್ಯಕ್ಷ ಪ್ರಕಾಶ್ ಡಿʼಸೋಜಾ ಅಜೆಕಾರು, ರಾಜ್ಯ ಕ್ಯಾಥೋಲಿಕ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಜ್ವಾಯ್ ಡಿ’ಸೋಜಾ ಅವರನ್ನು ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಬಿಜೆಪಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯರಾಮ ಸಾಲ್ಯಾನ್, ಜಿ.ಪಂ. ಸದಸ್ಯ ದಿವ್ಯಾಶ್ರೀ ಅಮೀನ್, ಮಿಯ್ಯಾರು ಗ್ರಾ.ಪಂ. ಹಿರಿಯ ಸದಸ್ಯ ಮಾಧವ ಕಾಮತ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಅಂತೋನಿ ಡಿʼಸೋಜಾ, ಮಿಯ್ಯಾರು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.









































