ಕಂಬಳದ ಫೋಟೊ ಟ್ವೀಟ್‌ ಮಾಡಿದ ಉಪರಾಷ್ಟ್ರಪತಿ: ಫಿದಾ ಆದ ಕರಾವಳಿಗರು

ದಿಲ್ಲಿ,ಆ. 29: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು  ರಾಷ್ಟ್ರೀಯ ಕ್ರೀಡಾ ದಿನವಾದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ  ಕಂಬಳದ ಫೋಟೊ ಹಂಚಿಕೊಂಡು ಕರಾವಳಿಗರ ಮನ ಗೆದ್ದಿದ್ದಾರೆ.

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳು. ಕೊರೊನಾ ಸಾಂಕ್ರಾಮಿಕ ರೋಗವು ಕ್ರೀಡೆಗಳನ್ನು ಕೂಡ ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದು ಕೂಡ ಅತ್ಯಂತ ಅವಶ್ಯಕವಾಗಿದೆ. ಹೀಗಾದಾಗ ಮಾತ್ರ ಸಂಕಷ್ಟದ ಸಂದರ್ಭದಲ್ಲಿ ಹೋರಾಡಲು ಹೆಚ್ಚು ಶಕ್ತಿ ಸಿಗುತ್ತದೆ  ಎಂಬ ಸಂದೇಶವನ್ನು ಅವರು ಟ್ವಿಟ್ಟರ್ ನಲ್ಲಿ ಕೊಟ್ಟಿದ್ದಾರೆ.

ನಿರಂತರವಾಗಿ ಯೋಗಾಭ್ಯಾಸ ಮತ್ತು ವ್ಯಾಯಾಮಗಳನ್ನು ಮಾಡಿ. ಫಿಟ್ ಇಂಡಿಯಾ ಅಭಿಯಾನವು ಜನ ಚಳವಳಿಯಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ.

ಕಂಬಳ ಮಾತ್ರವಲ್ಲದೆ, ಕುಸ್ತಿ, ಶೂಟಿಂಗ್ ಮತ್ತು ಇತರ ಕ್ರೀಡೆಗಳ ಬಗ್ಗೆಯೂ ಅವರ ಫೋಟೋ ಹಂಚಿಕೊಂಡಿದ್ದಾರೆ.

ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಅವರು ಉಪರಾಷ್ಟ್ರಪತಿಗಳ ನಡೆಯನ್ನು ಶ್ಲಾಘಿಸಿದ್ದಾರೆ.

















































































error: Content is protected !!
Scroll to Top