ನಿತ್ಯ ಭವಿಷ್ಯ -29-08-2020

ಮೇಷ

ಕುಜನು ಸಪ್ತಮದಲ್ಲಿದ್ದಾನೆ ಭಾರ್ಯಾರೋಗ , ವಿಯೋಗ ಸಂಸಾರದಲ್ಲಿ  ಅತೃಪ್ತಿ ,ಒಬ್ಬ ವಿದ್ವಾಂಸರ ಪ್ರಕಾರ 37 ನೇ ವರ್ಷದಲ್ಲಿ ವಿವಾಹ ಭಂಗ ಎಂದು ಹೇಳಿದ್ದಾರೆ, ಜಾತಕ ವಿಮರ್ಶೆ ಮಾಡಿ ಪರಿಹಾರ ಮಾಡುವ ಕ್ರಮ ಇದೆ. ಶನಿ ಚತುರ್ತದಲ್ಲಿ ಇದ್ದಾನೆ ತಾಯಿ ವಾಹನ ಮನೆಗಳಿಂದ ರಹಿತನೂ ರೋಗಿಯೂ ಆಗುತ್ತೀರಿ ಎಂಬ ಮಾತಿದೆ ಸಮತೂಲನದ  ಜೀವನ ನಡೆಸಲು ಆದ್ಯಾತ್ಮಿಕತೆಯ ಚಿಂತನೆ ಅನಿವಾರ್ಯವಾದೀತು .ವಿದ್ಯಾರ್ಥಿಗಳು ಓದುವ ಕಡೆಗೆ ಗಮನ ಕೊಡದೆ ಹೋಗುವ ಸಾಧ್ಯತೆ ಇದೆ. ಮೃತ್ಯುಂಜಯ ಜಪದ ನಿರಂತರ ಪಾರಾಯಣ ಅತೀ ಅಗತ್ಯವಿದೆ.

ವೃಷಭ

ಕೆಲವರು ನಿಮ್ಮನ್ನು ತೆಗಳುತ್ತಲೇ ಇರುತ್ತಾರೆ. ಅವರನ್ನು ನಿರ್ಲಕ್ಷಿಸಿರಿ. ಕುಜ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾನೆ. ನಿಮ್ಮ ಮನಸ್ಸು ಮತ್ತು ಆರೋಗ್ಯ ಸಮತೋಲನದಲ್ಲಿರಲಿ..

ಮಿಥುನ

ಶುಕ್ರ ರಾಹು ದ್ವಿತೀಯದಲ್ಲಿದ್ದು ನಿಮ್ಮ ಮಾತಿನ ಮೋಡಿಯಿಂದಲೇ ಯಶಸ್ವಿಯಾಗುವಿರಿ. ಸಹೋದರ ವರ್ಗದವರೊಂದಿಗೂ ಉತ್ತಮ ಬಾಂಧವ್ಯವಿರುತ್ತದೆ. ಭೂ ವ್ಯವಹಾರದಿಂದ ಉತ್ತಮ ಲಾಭ ಗಳಿಸುವಿರಿ

ಕರ್ಕಾಟಕ

ಜನ್ಮದಲ್ಲಿರುವ ಶನಿಯು ” ದು:ಖ ಪರಿಪೀಡಿತ ಏವ ಬಾಲ್ಯೆ ……..ಎಂಬಂತೆ ಆಲಸ್ಯ ಜಾಡ್ಯ ನಿದ್ರೆಗಳಿಗೆ ಕಾರಣನಾಗುತ್ತಾನೆ ಮೂಳೆ ಹಲ್ಲು ಹಾಗೂ ನರಕ್ಕೆ ಸಂಭಂಡ ಪಟ್ಟ ತೊಂದರೆಗಳು ಬರಲಿವೆ .ಮಕರದ ಶನಿ ಶುಭ ಫಲಗಳನ್ನೇ ಅಧಿಕವಾಗಿ ನೀಡಲಿದ್ದಾನೆ.  ಗುರು ಮತ್ತು ಕೇತು ವ್ಯಯದಲ್ಲಿ ಇದ್ದಾರೆ. ಧರ್ಮಬ್ರಷ್ಟನಾಗದಂತೆ  ನೀಚ ಕರ್ಮದಲ್ಲಿ ಪ್ರೀತಿ ಬರದಂತೆ ಎಚ್ಚರ ವಹಿಸಬೇಕು. ದೇವಸ್ಥಾನ ದೈವಸ್ಥಾನಗಳ ಬಗ್ಗೆ ಧರ್ಮದ ಬಗ್ಗೆ ಟೀಕೆ ಮಾಡುತ್ತೀರಿ.ಸತ್ಕರ್ಮಗಳಿಗೆ ವ್ಯಯ ಮಾಡುತ್ತೀರಿ.

ಕನ್ಯಾ
ಮನೆ, ವಾಹನ ಖರೀದಿಯ ಯೋಚನೆ ಮೂಡಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡಲಿದೆ. ಪತ್ನಿಯೊಂದಿಗೆ ವಿರಸ ಬರಲಿದೆ. ಕುಟುಂಬದ ಇತರ ಮಹಿಳೆಯರೊಂದಿಗೆ ಸಂಬಂಧ ಉತ್ತಮವಾಗಿರಲಿ.

ತುಲಾ

ರವಿ ಬುಧ ಮಿತ್ರರಾಗಿದ್ದರೂ ಶತ್ರುವಾದ ಶನಿಯು ಸಪ್ತಮದಲ್ಲಿರುವುದರಿಂದ ವೈವಾಹಿಕ ಜೀವನದಲ್ಲಿ ಅಪವಾದ ತರುವ ಸಾಧ್ಯತೆಯಿದೆ. ಪ್ರೀತಿ ಪ್ರೇಮದಿಂದ ದೂರವಿರುವುದು ಒಳ್ಳೆಯದು.
ಸಿಂಹ

ಆರೋಗ್ಯದಲ್ಲಿ ತುಸು ಏರುಪೇರಾಗುವ ಸಾಧ್ಯತೆ ಇದ್ದಾಗ್ಯೂ ಗುರು ಭಾಗ್ಯದಲ್ಲಿರುವುದರಿಂದ ನಿಮ್ಮ ಬದುಕಿನಲ್ಲಿ ಹೊಸ ಹೆಜ್ಜೆಯಿಡಲು ಸಕಾಲ. ಮಾತು ಎಚ್ಚರಿಕೆಯಿಂದಿರಲಿ.

ವೃಶ್ಚಿಕ

ಜೀವನ ದಲ್ಲಿ ಉದ್ಯೋಗ ಪರಿವರ್ತನೆಯ ಯೋಗವಿದೆ. ಆಗ ಹೊಸ ಚಿಂತನೆ ಹೊಸ ಕೆಲಸಗಳು ಆರಂಭ ವಾಗಲಿದೆ. ಅನುಭವವಿಲ್ಲದ ವ್ಯಾಪಾರ ವ್ಯವಹಾರದಲ್ಲಿ ಹಣ ಹೂಡುವುದು ದುಡುಕು ನಿರ್ಧಾರವಾದೀತು ನಿಮ್ಮ ಆರ್ಥಿಕ ಪೃಸ್ಥಿತಿ ಏರುಪೇರಾದೀತು .ಸತ್ಯ ಹರಿಶ್ಚಂದ್ರನಂತೆ ಸತ್ಯ ಹೇಳಲು ಹೋಗಿ ನಿಷ್ಟುರಕ್ಕೆ ಕಾರಣರಾಗದಂತೆ ಎಚ್ಚರವಹಿಸಿರಿ .ನಿಮ್ಮ ಒಬ್ಬ ಬಾರಿ ಪರಿಚಯದ ಹಿತ ಶತ್ರು ಸಂಭಾವಿತನಂತೆ ವರ್ತಿಸುತ್ತಾ ನಿಮಗೆ ಮೋಸಮಾದಲು ತಯಾರಾಗಿದ್ದಾನೆ ,ಎಚ್ಚರವಿರಲಿ.

ಧನು

 ಶನಿಯು ದ್ವಿತೀಯದಲ್ಲಿರಲು ಕುಟುಂಬ ಸುಖ ಸಿಗಲಾರದು ಮಾತಿನಿಂದ ಮತ್ತು ದುಡ್ಡಿನಿಂದ ವೈಮನಸ್ಸಿಗೆ ಕಾರಣನಾಗುತ್ತಾನೆ .ಆದರೆ ಮಕರ ರಾಶಿಯ ಧನ ರಾಶಿಯ ಶನಿ ಯು ಆರ್ಥಿಕ ಭದ್ರತೆ ಯನ್ನು ನೀಡಿದರೂ ಕಠಿಣವಾದ ದುಡಿಮೆಗೂ ಕಾರಣನಾಗುವನು.. ಗುರು ಜನ್ಮದಲ್ಲಿದ್ದಾಗ  “ಶೋಭಾವಾನ್ ಸುಕೃತೇ……..ಎಂಬಂತೆ ನ್ಯಾಯ ಧರ್ಮ ಸತ್ಯ ದಲ್ಲಿ ಶ್ರದ್ಧೆ ಆಸ್ತಿಕ ನಾಗುತ್ತೀರಿ ದೈವಾನುಗ್ರಹವಿರಿತ್ತದೆ ಕಫಡ್ಕ ತೊಂದರೆ ಇರುತ್ತದೆ ಧನುವಿನ ಗುರು ಅತೀ ಶುಭಾನು ಆದರೆ ಕೇತು ಜೊತೆಯಲ್ಲಿದ್ದು ಪೂರ್ಣ ಶುಭ ಫಲ ಸಿಗಲಾರದು ,

ಮಕರ

ಅಷ್ಟಮದಲ್ಲಿ ಶನಿ ಇರುವುದರಿಂದ ಹಿರಿಯರ ಆರೋಗ್ಯದ ಬಗ್ಗೆ, ನಿಮ್ಮ ಬಗ್ಗೆ ಜಾಗ್ರತೆ ವಹಿಸಿರಿ. ಅನಾವಶ್ಯಕ ಆರ್ಥಿಕ ಚಿಂತೆ ನಿಮ್ಮನ್ನು ಕಾಡಲಿವೆ. ಆದರೂ, ಸಪ್ತಮದ ಗುರು ನಿರೀಕ್ಷಿಸಿದ ಬದಲಾವಣೆಯನ್ನು ತರಲಿದ್ದಾನೆ.

ಕುಂಭ

ಲಾಭಾಧಿಪತಿ ಲಾಭದಲ್ಲಿರಲು “ಲಾಭೆಷೆ ಲಾಭ: ಸರ್ವೇಶು ಕರ್ಮಾಸು ಪಾಂಡಿತ್ಯಮ್ ಚ ಸುಖಮ್ ವರ್ಧತೆ ಚ ದಿನೇ ದಿನೇ ” ಎಂಬಂತೆ ಸಹೋದರರಿಂದ ಅಥವಾ ವ್ಯವಹಾರದಿಂದ ಅಧಿಕ ಲಾಭವನ್ನು ಪಡೆಯಲಿದ್ದಾನೆ .ಪಾಪಗ್ರಹರು ಕೂಡ ಉತ್ತಮ ಫಲವನ್ನೇ ನೀಡುತ್ತಾನೆ ,ಕಿವಿರೂಗ ಜ್ಯೇಷ್ಟ ಸಹೋದರನಿಗೆ ಸಮಸ್ಯೆ ಬರುವ ಸಾಧ್ಯತೆ .ಶನಿಯು ವಾತ ರೋಗವನ್ನು ಪಾದಗಳಿಗೆ ಸಂಬಂಧ ಪಟ್ಟ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ತರುತ್ತಾನೆ ದುಂದುವೆಚ್ಚ ಮಾಡುವುದು ನಿಮ್ಮ ಹವ್ಯಾಸವಾಗಿರುತ್ತದ ,

ಮೀನ

ಒಮ್ಮೆ ಮಾಡಿದ ತಪ್ಪನ್ನೇ ಮತ್ತೆ ಮುಂದುವರಿಸುವುದು ಮೂರ್ಖತನವಲ್ಲವೇ, ನಿಮಗೆ ಉತ್ತಮ ಭವಿಷ್ಯ ಸದಾ ತೆರೆದುಕೊಂಡಿರುತ್ತದೆ ದೇವರು ನಿಮ್ಮ ಬಳಿಗೆ ಯಾವ ರೂಪದಲ್ಲಿ ಬರುತ್ತಾರೆ ಎಂದು ಬಲ್ಲವರಾರು. ನಿಮ್ಮ ಸಂಚಿತ ಮನಸ್ಸಿನ ಅರಿವು ಉಂಟಾಗಲಿದೆ, ಸಮಯ ಅವಕಾಶವನ್ನು ನೀಡಲಿದೆ ವ್ಯಾಪಾರ ವ್ಯವಹಾರದ ಚೇತರಿಕೆಗೆ ಸ್ವಲ್ಪ ಸಮಯ ಅಂದರೆ ನವೆಂಬರ್ 20 ತಾರೀಕಿನವರೆಗೆ ಕಾಯಲೇಬೇಕು

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529 / 80739 73603









































































































error: Content is protected !!
Scroll to Top