ಪ್ರೇಮದ ಪಯಣದಲ್ಲಿ…

ನನ್ನ ಬಾಳ ಪಯಣದಲಿ…

ನಿನ್ನದೊಂದು ಪ್ರೀತಿಯ ಹೆಜ್ಜೆ ಗುರುತು…

ನನ್ನ ಹೃದಯದಲಿ ಲಜ್ಜೆ ಇಟ್ಟು

ಹೆಜ್ಜೆ ಹೆಜ್ಜೆಯಲ್ಲೂ ನಿನ್ನ ನೆನಪಿನ ಗುರುತು ಮೂಡಿದೆ…

ಸದ್ದಿಲ್ಲದೆ ಬಂದು ಸುದ್ದಿ ಮಾಡಿದೆ ನನ್ನ ಮನದೊಳಗೆ…

ತುಟಿಯಂಚಿನಲಿ ನೀ ಬೀರೋ ತುಂಟ ನಗುವೊಂದು…

ನನ್ನ ಭಾವ ಪರವಶ ಮಾಡಿದೆ…

ನಿನ್ನ ಪ್ರೀತಿ ಮಾತಿಗಾಗಿ ಕಾಯುವೆನು ಅನುದಿನವೂ…

ನನ್ನೆಲ್ಲಾ ನೋವ ಮರೆಯೋಕೆ…

ನನ್ನುಸಿರು ಇರೋವರೆಗೂ…

ಉಸಿರಲ್ಲಿ ಉಸಿರಾಗಿ ಬೆರೆತು ಬಿಡು …

ನನ್ನ ಬಿಟ್ಟು ದೂರ ಹೋಗದೆ…

ನೀನೊಂದು ಅಮೂಲ್ಯ ಉಡುಗೊರೆ ನನ್ನ ಪಾಲಿಗೆ….

ಕಳೆಯದಂತೆ ಜೋಪಾನ ಮಾಡುವೆ….

ನನ್ನ ಹೃದಯದ ಅರಮನೆಯ  ಒಳಗೆ…

ಉಮಾ ಸುನಿಲ್, ಹಾಸನ















































































error: Content is protected !!
Scroll to Top