ಬೆಂಗಳೂರು,ಆ.25: ಕರ್ನಾಟಕ ಸರಕಾರದ ಪರಿಷ್ಕೃತ ಕೊರೊನಾ ಮಾರ್ಗಸೂಚಿ ಹೊರ ರಾಜ್ಯಗಳಿಂದ ಮುಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ದೊಡ್ಡದೊಂದು ರಿಲೀಫ್ ನೀಡಿದೆ.
ಮುಂಬಯಿ, ಪುಣೆ ಮುಂತಾದೆಡೆಗಳಲ್ಲಿರುವ ಕರಾವಳಿ ಕರ್ನಾಟಕದವರು ಹೊಸ ಮಾರ್ಗಸೂಚಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಯಾವುದೇ ಆತಂಕವಿಲ್ಲದೆ ಊರಿಗೆ ಹೋಗಿ ಬರಬಹುದು ಎಂಬ ಖುಷಿ ಅವರದ್ದು. ಹಿಂದಿನ ಮಾರ್ಗಸೂಚಿ ಪ್ರಕಾರ ಹೊರ ರಾಜ್ಯಗಳಿಂದ ಬಂದವರು ಕತ್ತಾಯವಾಗಿ 14 ದಿನ ಕ್ವಾರಂಟೈನ್ ಆಗಬೇಕಿತ್ತು. ಇದರಿಂದ ಅವರಿಗೆ ಮಾತ್ರವಲ್ಲದೆ ಮನೆಯವರಿಗೂ ಸಮಸ್ಯಯಾಗುತ್ತಿತ್ತು. ಅಲ್ಲದೆ ಒಂದೆರಡು ದಿನಗಳ ತುರ್ತು ಕಾರ್ಯಕ್ಕಾಗಿ ಬಂದು ಹೋಗುವಂತಿರಲಿಲ್ಲ. ಇದೀಗ ಈ ಚಿಂತೆ ದೂರವಾಯಿತು ಎಂದು ಹಲವು ಮು<ಬಯಿ ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ.
ಪರಿಷ್ಕ್ರತ ಮಾರ್ಗಸೂಚಿಯಲ್ಲೇನಿದೆ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಂತೆ…
-ಅಂತರ್ ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದ ಹಿಂದಿನ ಎಲ್ಲ ಸುತ್ತೋಲೆಗಳು ರದ್ದಾಗಿವೆ.
-ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್, ಕೈ ಮೇಲೆ ಮುದ್ರೆ ಹಾಕುವುದು, ರಾಜ್ಯದ ಗಡಿಗಳು ಹಾಗೂ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆ, ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡುವುದು ಸೇರಿದಂತೆ ಯಾವ ನಿಯಮವೂ ಇಲ್ಲ.
-ಹೊರ ರಾಜ್ಯದಿಂದ ಬಂದ ಪ್ರಯಾಣಿಕರು ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ, ಕ್ವಾರಂಟೈನ್ಗೆ ಒಳಗಾಗುವ ಅಗತ್ಯವಿಲ್ಲ. –ನೇರವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು
– ಹೊರ ರಾಜ್ಯಗಳಿಂದ ಬಂದವರು ರೋಗ ಲಕ್ಷಣಗಳ ಕಡೆಗೆ ಸ್ವಯಂ ನಿಗಾವಹಿಸಬೇಕು.
– ಕೆಮ್ಮು, ಜ್ವರ, ಶೀತ, ಉಸಿರಾಟ ತೊಂದರೆಯಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು.
-ರಾಜ್ಯಕ್ಕೆ ಬರುವಾಗಲೇ ರೋಗ ಲಕ್ಷಣಗಳಿದ್ದರೆ ತಾವಾಗಿಯೇ ಪ್ರತ್ಯೇಕವಾಗಿ ವಾಸಿಸಬೇಕು ಮತ್ತು ವೈದ್ಯಕೀಯ ಸಮಾಲೋಚನೆ ಪಡೆಯಬೇಕು.
-ಆಪ್ತಮಿತ್ರ ಸಹಾಯವಾಣಿಗೆ (14410) ಕರೆ ಮಾಡಬಹುದು.
– ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ ಸೋಪಿನಲ್ಲಿಕೈ ತೊಳೆದುಕೊಳ್ಳುವಂಥ ನಿಯಮಗಳನ್ನು ಪಾಲಿಸಬೇಕು.
– ಅಂತರ್ ರಾಜ್ಯ ಚಾಲನೆಗೆ ವ್ಯಕ್ತಿ ಮತ್ತು ಸರಕುಗಳ ಸಾಗಣೆಯಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ.
– ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು, ಕಾರ್ಮಿಕರು, ವಾಪ್ಯಾರಿಗಳು, ಸೇರಿ ಎಲ್ಲರಿಗೂ ಪರಿಷ್ಕೃತ ಮಾರ್ಗಸೂಚಿ ಅನ್ವಯಿಸಲಿದೆ.







































