ಉದ್ಯಮಿ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾವಿ ನಿಧನ

ಹೆಬ್ರಿ,ಆ. 24 : ಹೆಬ್ರಿ ಚಾರ ಕೂತಾಡಿ ಮನೆತನದ ಕೆ. ರತ್ನಾಕರ್ ಶೆಟ್ಟಿ ಬೆಳಗಾವಿ ಆ.25ರಂದು ನಿಧನರಾದರು. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಮುಂದಾಳುವಾಗಿದ್ದ  ಸರಳ ಸಜ್ಜನಿಕೆಯ ಜನನಾಯಕ ಅವರು.

    ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅವರು  ಬೆಳಗಾವಿಯಲ್ಲಿ ಉದ್ಯಮವನ್ನು ಸ್ಥಾಪಿಸಿ, ಹಲವರಿಗೆ ಉದ್ಯೋಗದಾತರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದರು. ಬೆಳಗಾವಿಯ ಜನ ನಾಯಕ ಸತೀಶ್ ಜಾರಕಿಹೋಳಿ ಅವರಿಗೆ ಆಪ್ತರಾಗಿದ್ದರು.

ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ , ಬೆಳಗಾಂ ಮರ್ಚಂಟ್ಸ್ ಕೊ- ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಲಿ.ಬೆಳಗಾವಿ ಇದರ ಅಧ್ಯಕ್ಷರಾಗಿ, ಹೆಸ್ಕಾಮ್ ಬೆಳಗಾವಿ ಉತ್ತರದ ನಾಮ ನಿರ್ದೇಶನ ಸದಸ್ಯರಾಗಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿಯೂ ವಿಶೇಷವಾಗಿ ಸೇವೆ ಸಲ್ಲಿಸಿದ್ದರು. ಹುಟ್ಟೂರಿನ ಅಭಿವೃದ್ಧಿ  ಕೆಲಸಗಳಿಗೆ  ನೆರವಾಗುತ್ತಿದ್ದರು.

    ದೈವಭಕ್ತರಾದ ರತ್ನಾಕರ ಶೆಟ್ಟಿಯವರು ಚಾರದಲ್ಲಿ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.  ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಅವರು ಪತ್ನಿ, ನಾಲ್ವರು ಪುತ್ರರು  ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.























































error: Content is protected !!
Scroll to Top