ಉಡುಪಿ ಜಿಲ್ಲೆಗೆ 24ರ ಹರೆಯ

ಉಡುಪಿ ಜಿಲ್ಲೆ ಉದ್ಘಾಟನೆ ಆಗಿ ಆಗಸ್ಟ್ 25ಕ್ಕೆ  24 ವರ್ಷ ತುಂಬಿತು. 1997 ಆಗಸ್ಟ್ 25 ರಂದು ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರು ಉಡುಪಿ ಜಿಲ್ಲೆಯ ಉದ್ಘಾಟನೆ ಮಾಡಿದ್ದರು. ನಾನು ಕೃಷ್ಣ ಪ್ರಿಯ ಎಂದು ಅವರು ಹೇಳಿದ್ದು ಹಲವರ ಕುಹಕಕ್ಕೆ ಕಾರಣವಾಗಿತ್ತು. ಅಂದು ಉಸ್ತುವಾರಿ ಮಂತ್ರಿ ಆಗಿದ್ದವರು  ಜಯಪ್ರಕಾಶ್ ಹೆಗ್ಡೆ. ಉಡುಪಿ ಜಿಲ್ಲೆಯ ರಚನೆಯ ಹೆಚ್ಚಿನ ಶ್ರೇಯ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಲ್ಲಬೇಕು. ಈ ಐತಿಹಾಸಿಕ ನಿರ್ಧಾರದಿಂದ ಉಡುಪಿ ಜಿಲ್ಲೆ ಆಡಳಿತಾತ್ಮಕವಾಗಿ ತುಂಬ ಅಭಿವೃದ್ಧಿ ಆಗಲು ಸಾಧ್ಯವಾಯಿತು. ಮುಂದೆ ಡಾಕ್ಟರ್ ವಿ. ಎಸ್. ಆಚಾರ್ಯ ಅವರ ಪ್ರಯತ್ನದಿಂದಾಗಿ ರಜಾತಾದ್ರಿ ಎನ್ನುವ ಆಡಳಿತ ಸೌಧ ತಲೆಯೆತ್ತಿ ನಿಂತಿತು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯಮಿಕ ಆಗಿ ಉಡುಪಿ ಬೃಹತ್ ಆಗಿ ಬೆಳೆಯಿತು.

ಅಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆ ರಚಿಸಲಾಗಿತ್ತು. ಈಗ ಬ್ರಹ್ಮಾವರ, ಹೆಬ್ರಿ ಮತ್ತು ಕಾಪು ತಾಲೂಕುಗಳಾಗಿವೆ.

ಮೆಡಿಕಲ್‌ ಕಾಲೇಜು, ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ ಅನೇಕ ಕಾಲೇಜುಗಳನ್ನು ಹೊಂದಿರುವ ಉಡುಪಿ ಶೈಕ್ಷಣಿಕ ಕೇಂದ್ರವಾಗಿ ದೇಶದಲ್ಲಿ  ಹೆಸರುವಾಸಿಯಾಗಿದೆ. ಉಡುಪಿ ನಗರದಲ್ಲಿರುವ ಕೃಷ್ಣ ಮಠ ವಿಶ್ವ ಪ್ರಸಿದ್ಧ. ಇದಲ್ಲದೆ ಇನ್ನೂ ಅನೇಕ ಧಾರ್ಮಿಕ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಕರ್ನಾಟಕದ ಪ್ರಮುಖ ಪ್ರವಾಸಿ ಜಿಲ್ಲೆಯಾಗಿಯೂ ಉಡುಪಿ ಗುರುತಿಸಿಕೊಂಡಿದೆ.  ಮುಂದಿನ ವರ್ಷ ಉಡುಪಿಗೆ ರಜತ ಸಂಭ್ರಮ.















































































error: Content is protected !!
Scroll to Top