ನಿತ್ಯ ಭವಿಷ್ಯ 13-08-2020

ಮೇಷ

ಯೋಜನಾಬದ್ಧವಾದ  ನಿಮ್ಮ ಪ್ರತಿಯೊಂದು ವ್ಯವಹಾರಗಳು ಯಶಸ್ವಿಯಾಗಲಿವೆ . ಹಣಕಾಸಿನ ವಿಚಾರದಲ್ಲಿ ನಿಮ್ಮಲ್ಲಿರುವ ಧಾರಾಳತನ ಕೆಲವೊಮ್ಮೆ ನಿಮಗೆ ಸಮಸ್ಯೆಯನ್ನು ತರಲಿದೆ .   ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಭಾಗ್ಯದ ಗುರು ನಿಶ್ಚಿತ ಶುಭ ಫಲವನ್ನು ನೀಡಲಿದ್ದಾನೆ. ನಿತ್ಯವೂ ನೀವು ಮಾಡುವ ವಿಷ್ಣು ಸಹಸ್ರನಾಮ ಪಾರಾಯಣ ಬಹಳ ಉತ್ತಮ ಫಲ ನೀಡಲಿದೆ.

ವೃಷಭ

ಆರ್ಥಿಕವಾಗಿ ಆಗಾಗ ಖರ್ಚು-ವೆಚ್ಚಗಳು ಅಧಿಕವಾದರೂ ಬರುವ ಆದಾಯ ಉತ್ತಮವಾಗಿರುತ್ತದೆ . ಬಹಳ ಮಹತ್ವದ ಭವಿಷ್ಯದ ಚಿಂತನೆ ಮನಸ್ಸಿನಲ್ಲಿ ನಡೆದಿದೆ .ಮನೆ ನಿರ್ಮಾಣದ ಕೆಲಸ ಸಾಗುತ್ತಿದೆ.  ಸಾಮಾಜಿಕವಾಗಿ ನಿಮ್ಮ ಪ್ರತಿಭೆಯಿಂದಾಗಿ ನೀವು ಚಂದ್ರನಂತೆ ಶೋಭಿಸುವಿರಿ .ಈಶ್ವರ ದೇವರ ಪ್ರಾರ್ಥನೆ ನಡೆಯುತ್ತಿರಲಿ .

ಮಿಥುನ

ಶನಿಯ ಪ್ರತಿಕೂಲತೆ ಆರ್ಥಿಕವಾಗಿ ನಿಮ್ಮನ್ನು ಸಾಲಗಾರನನ್ನಾಗಿ ಮಾಡುತ್ತದೆ .ಆದರೆ ಸಪ್ತಮದಲ್ಲಿ ಇರುವ ಗುರು ದೈವಾನುಗ್ರಹ ನೀಡುವುದರಿಂದ ಕಷ್ಟದಲ್ಲಿಯೇ ಸುಖದ ಅನುಭವ ಬರಲಿದೆ.ಭೂಮಿ ವ್ಯವಹಾರದಲ್ಲಿ ಧನಾಗಮನ ಉತ್ತಮವಾಗಲಿದೆ.ನಿದ್ದೆ ಮತ್ತು ಆಹಾರ ಸರಿಯಾದ ಸಮಯಕ್ಕೆ ಸಿಗದಿರುವುದರಿಂದ ದೇಹಾಯಾಸಕ್ಕೆ ಕಾರಣ ವಾಗಲಿದೆ. ವಿಷ್ಣು ದೇವರಿಗೆ ಯಥಾಶಕ್ತಿ ಸೇವೆಯನ್ನು ಮಾಡಿರಿ.

ಕರ್ಕಾಟಕ  

ಬಹಳ ಯೋಜನಾಬದ್ಧವಾಗಿ ಕೆಲವೊಂದು ಕೆಲಸಗಳು ನಡೆಯುತ್ತಿವೆ.ಇದರಿಂದ ಅನಿರೀಕ್ಷಿತವಾಗಿ ಧನಾದಾಯ ಅಭಿವೃದ್ಧಿಯನ್ನು  ಕಾಣುತ್ತಿದೆ . ಷಷ್ಠದ ಗುರು ತಂದೆಯವರಲ್ಲಿ ಅಥವಾ ಹಿರಿಯರಲ್ಲಿ ಅಭಿಪ್ರಾಯ ಬೇಧವನ್ನು ತರಲಿದೆ. ಸಹನೆಯನ್ನು ಕಳೆದುಕೊಳ್ಳಬೇಡಿ.ಸ್ತಗಿತಗೊಂಡ ಅನೇಕ ಕೆಲಸಗಳು ಪುನಾರಂಭ ಗೊಳ್ಳಲಿವೆ.ದುರ್ಗೆಯನ್ನು ಪ್ರಾರ್ಥಿಸಿರಿ.

ಸಿಂಹ 

ಅನೇಕ ರೀತಿಯಲ್ಲಿ ಮಾನಸಿಕ ಗೊಂದಲಕ್ಕೆ ಒಳಗಾದರೂ ಪಂಚಮದ  ಗುರು ದೈವಾನುಗ್ರಹವನ್ನು ನೀಡುತ್ತಿರುವುದರಿಂದ  ಅಷ್ಟೊಂದು ಸಮಸ್ಯೆಯನ್ನು ಮಾಡುವುದಿಲ್ಲ .ನೀವೇ ತಂದುಕೊಂಡ ಕೌಟುಂಬಿಕ ಸಮಸ್ಯೆಯೊಂದು ಹೊಸ ರೂಪವನ್ನು ಪಡೆದುಕೊಳ್ಳಲಿದೆ .ನಿಮ್ಮ ದುಡುಕು  ವರ್ತನೆಯಿಂದ  ದಾಂಪತ್ಯದಲ್ಲಿ ವಿರಸವನ್ನು ತರಲಿದೆ. ದೃಢ ನಿರ್ಧಾರಗಳನ್ನು ಕೈಗೊಳ್ಳಿರಿ. ರುದ್ರ ಜಪ ಪಾರಾಯಣ ಮಾಡಿರಿ.

ಕನ್ಯಾ

ಪಂಚಮದಲ್ಲಿರುವ ಶನಿ ಹೇಳುತ್ತಿರುವಂತೆ ನೀವು ಮಾಡಲು ಹೊರಟಿರುವ ಕೆಲವೊಂದು ವ್ಯವಹಾರಗಳು ಸರಿಯಾಗಿವೆಯೇ ಎಂದು  ಹಲವು ಬಾರಿ ಯೋಚಿಸಿ. ನಿಮ್ಮ ಆರ್ಥಿಕ ನಿರ್ವಹಣೆಯನ್ನು ಮಗದೊಮ್ಮೆ ಯೋಚಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ  ಮತ್ತು ಕುಲದೇವರ ದರ್ಶನ ಮಾಡುವುದರಿಂದ ಒಳಿತಾಗುವುದು.

ತುಲಾ

ನಿಮ್ಮ ಬುದ್ಧಿವಂತಿಕೆಯಿಂದ ಅನೇಕ ಕೆಲಸಗಳು ಲೀಲಾಜಾಲವಾಗಿ ನೆರವೇರಲಿವೆ .ದೇವರ ಹಾಗೆ ನಿಮ್ಮ ಮಿತ್ರರ ಸಹಕಾರ ಸಕಾಲದಲ್ಲಿ ನಿಮಗೆ ಒದಗಿ ಬರಲಿದೆ.ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸಲಿದ್ದೀರಿ. ಯಂತ್ರಗಳಲ್ಲಿ ಕೆಲಸ ಮಾಡುವವರು ನಿತ್ಯವೂ ಶನಿ ಜಪವನ್ನು ಮಾಡುವುದು ಅತಿ ಅಗತ್ಯವಾಗಿದೆ.

ವೃಶ್ಚಿಕ

ದ್ವಿತೀಯದಲ್ಲಿ ಗುರುವಿದ್ದು ದೈವಾನುಗ್ರಹ ನೀಡುತಿದ್ದರೂ ಕೆಲವೊಂದು ಅನಪೇಕ್ಷಿತ  ಕೆಲಸಗಳು ನಿಮ್ಮಿಂದ ನಡೆಯಲಿವೆ.ಜಾಗ್ರತೆ  ಸಹನೆ ಇರಲಿ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಆಡಂಬರ ಬೇಡ .ಸಾಂಸಾರಿಕವಾಗಿ  ಪತ್ನಿಯ ಕಿರಿಕಿರಿ ಇದ್ದರೂ ಅದು ಉತ್ತಮ ಸಲಹೆಯೇ ಆಗಿರುತ್ತದೆ.ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಫಲವನ್ನು ಪಡೆಯುವಿರಿ.

ಧನು

ನೌಕರರಿಗೆ ಹೆಚ್ಚು ಜವಾಬ್ದಾರಿ ಬರಲಿದೆ.ಬೇರೆಯವರ ಕೆಲಸಕ್ಕಾಗಿಯೇ ನಿಮ್ಮ ಅಮೂಲ್ಯ ಸಮಯ ವ್ಯಯವಾಗಲಿದೆ .ಆರ್ಥಿಕವಾಗಿ ಹೆಚ್ಚಿನ ಧನಾಗಮನವಿದ್ದರೂ ವಿವಿಧ ರೂಪದಲ್ಲಿ ಖರ್ಚು ವೆಚ್ಚಗಳು ಅನಗತ್ಯವಾಗಿ ಬರಲಿದೆ.  ಅವಕಾಶಗಳನ್ನು ಸರಿಯಾದ  ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು  ಉತ್ತಮ.

ಮಕರ  

ಶನಿ ಜನ್ಮದಲ್ಲಿ ಇರುವುದರಿಂದ ಮಾನಸಿಕ ಒತ್ತಡ ಮತ್ತು ಆರೋಗ್ಯದಲ್ಲಿ ಏರುಪೇರು ಬರಲಿದೆ. ಶುಭ ಕಾರ್ಯಗಳಿಗೆ ಹಣದ ಮುಗ್ಗಟ್ಟು ಬರಲಿದೆ.ನಿರುದ್ಯೋಗಿಗಳಿಗಳಿಗೆ,  ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯವಿದೆ.ತಾಳ್ಮೆ ಸಹನೆ ಅಗತ್ಯವಿರುತ್ತದೆ .ನಿತ್ಯವೂ ಶಿವ ಸ್ಮರಣೆ ಮಾಡುತ್ತಾ ಬರುವುದೇ ಇದಕ್ಕಿರುವ ಏಕೈಕ ಪರಿಹಾರವಾಗಿದೆ.

ಕುಂಭ

ಶುಭ ಸ್ಥಾನದಲ್ಲಿ ಗುರುವಿದ್ದು ಉತ್ತಮ ದೈವಾನುಗ್ರಹ ಪ್ರಾಪ್ತಿಯಿರುವುದರಿಂದ ಪ್ರತಿ ಕ್ಷಣ ಸಕಾಲಿಕ ನೆರವು ದೊರೆತು ನಿಮ್ಮ ಮನೋಭೀಷ್ಟತೆ ನೆರವೇರಲಿದೆ. ವಿವಾಹ ಸಂಬಧಿಸಿದ ವಿಚಾರಗಳು ಪ್ರಸ್ತಾವಗೊಳ್ಳಲಿವೆ.ವ್ಯಯದಲ್ಲಿ ಶನಿ ಇರುವುದರಿಂದ ಹೆಚ್ಚಿನ ಪ್ರಯತ್ನ ಅಗತ್ಯವಿರುತ್ತದೆ.ಪತ್ನಿಯವರಿಗೆ ಆರೋಗ್ಯದ ಸಮಸ್ಯೆಯನ್ನು ಅಷ್ಟಮದ ರವಿ ಬುಧರು ತರಲಿದ್ದಾರೆ.

ಮೀನ

ನಿಮ್ಮ ಉದ್ಯೋಗದಲ್ಲಿ ಕೆಲಸಗಳ ಒತ್ತಡದಿಂದ ದ್ವಂದ್ವ ವಿಚಾರಗಳು ಮನಸ್ಸಿನ ಮೇಲೆ ಪ್ರಭಾವ  ಬೀರಲಿವೆ. ರಾಜಕೀಯ ವ್ಯಕ್ತಿಗಳು ಬಹಳ ಎಚ್ಚರದಿಂದ  ಹೇಳಿಕೆಗಳನ್ನು ನೀಡಿದಲ್ಲಿ ಉತ್ತಮ ಸ್ಥಾನಮಾನಗಳು ದೊರಕಲಿವೆ.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ , ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ, ಹಿರಿಯಂಗಡಿ, ಕಾರ್ಕಳ,

ಸಂಪರ್ಕ ಮಾಹಿತಿ: 97414 89529/80739 73603

 

 









































































































error: Content is protected !!
Scroll to Top