ಕಾರ್ಕಳ : ನಿಟ್ಟೆಯ ಎನ್.ಎಂ.ಎ.ಎಂ. ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ ವಿಭಾಗದ ವತಿಯಿಂದ ನವದೆಹಲಿಯ ಎ.ಐ.ಸಿ.ಟಿ.ಇ. ಪ್ರಾಯೋಜಿತ ಆನ್‍ಲೈನ್ ಅಲ್ಪಾವದಿ ತರಬೇತಿ ಕಾರ್ಯಕ್ರಮ (ಎಸ್‍ಟಿಟಿಪಿ) ಸರಣಿಯನ್ನು ಆ.7 ರಂದು ಸಂಸ್ಥೆಯಲ್ಲಿ ಉದ್ಘಾಟನೆಗೊಂಡಿತು. ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಐಐಎಸ್‍ಸಿ ಸಿಇಡಿಟಿಯ ನೆಟ್‍ವರ್ಕ್ ಪ್ರಾಜೆಕ್ಟ್‍ನ ಮಾಜಿ ಮುಖ್ಯಸ್ಥ ಡಾ. ಅಶೋಕ್ ರಾವ್ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೂಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ ವಿಭಾಗದ ಮುಖ್ಯಸ್ಥೆ ಮತ್ತು ಎಸ್‍ಟಿಟಿಪಿ ಸಂಯೋಜಕಿ ಡಾ.ರೇಖಾ ಭಂಡಾರ್ಕರ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಅಸೋಸಿಯೇಟ್ ಪ್ರೊಫೆಸರ್ ಡಾ. ರೂಪಾ ಬಿ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅಡ್ವಾನ್ಸ್ಡ್ ಟಾಪಿಕ್ಸ್ ಇನ್ ಮೆಷಿನ್ ಲರ್ನಿಂಗ್ & ಅಪ್ಲಿಕೇಶನ್ ಇನ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಎಂಬ ವಿಷಯದ ಕುರಿತು ತರಬೇತಿ ನಡೆಯಲಿದೆ.


































































