ಬೆಂಗಳೂರು ಗಲಭೆ ಯೋಜಿತ ಕೃತ್ಯ: ಬವಸರಾಜ ಬೊಮ್ಮಾಯಿ

ಉಡುಪಿ, ಆ.12: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನಿನ್ನೆ ರಾತ್ರಿ ನಡೆದ ಗಲಭೆ ಒಂದು ಯೋಜಿತ ಕೃತ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಹೇಳಿದ್ದಾರೆ.

ಗಲಭೆ ನಿಯಂತ್ರಿಸಲು ಕೊನೆಯ ದಾರಿಯಾಗಿ ಪೊಲೀಸರು ಗೋಲಿಬಾರ್‌ ಮಾಡಿದ್ದಾರೆ. ಗಲಭೆಯ ತನಿಖೆ ಸರಿಯಾದ  ದಿಕ್ಕಿನಲ್ಲಿ ಸಾಗುತ್ತಿದೆ. 100ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ.ಗಲಭೆ ಎಸಗಿದವರನ್ನು ಯಾವ ಕಾರಣಕ್ಕೂ  ಬಿಡುವುದಿಲ್ಲ. ಯಾವುದೇ ಪ್ರಭಾವ, ವಶೀಲಿಗೆ ಪೊಲೀಸ್‌ ಇಲಾಖೆ ಮಣಿಯುವುದಿಲ್ಲ ಎಂದು  ಹೇಳಿದ್ದಾರೆ.

ಗಲಭೆ ನಡೆದ ಸ್ಥಳಗಳಲಿರುವ ಸಿಸಿಟಿವಿ ಕ್ಯಾಮರಗಳು ತನಿಖೆಗೆ ಸಹಕರಿಸುತ್ತಿವೆ.  ದುಷ್ಕರ್ಮಿಗಳು ಫೇಸ್‌ಬುಕ್‌ನಲ್ಲಿ ಗಲಭೆಗೆ ಕರೆ ಕೊಟ್ಟಿರುವ ಕುರಿತು ಮಾಹಿತಿ ಸಿಕ್ಕಿದೆ. ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದಲೇ ಗಲಭೆ ಎಸಗಲಾಗಿದೆ ಎಂದು  ಬೊಮ್ಮಾಯಿ ತಿಳಿಸಿದ್ದಾರೆ.

 error: Content is protected !!
Scroll to Top