ಎಸ್.ಎಸ್.‌ಎಲ್‌.ಸಿ ಫಲಿತಾಂಶ : ಸುರಭಿ ಉಡುಪಿ ಜಿಲ್ಲೆಗೆ ಟಾಪರ್‌

ಕಾರ್ಕಳ,ಆ. 10: ಈ ಸಾಲಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದಿರುವ ಬೈಂದೂರು ಕಂಬದಕೋಣೆಯ ಸಾಂದೀಪನ್‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್.‌ ಶೆಟ್ಟಿಯವರು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದರೆ.

ನಿತ್ಯ 6 ರಿಂದ 8 ತಾಸಿನ ಅಧ್ಯಯನ ತನ್ನ ಯಶಸ್ಸಿನ ಗುಟ್ಟು ಎಂದು ಹೇಳಿದ್ದಾರೆ ಸುರಭಿ. ಪಾಠಗಳನ್ನು ಅರ್ಥ ಮಾಡಿಕೊಳ್ಳಲು ಅವರು ಆಗಾಗ ಶಿಕ್ಷಕರ ಮಾರ್ಗದರ್ಶನ  ಪಡೆದುಕೊಳ್ಳುತ್ತಿದ್ದರಂತೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನ ಇಟ್ಟುಕೊಂಡು ಆಧ್ಯಯನ  ಮಾಡಿದ್ದು ಬಹಳ ಉಪಯೋಗವಾಗಿದೆ. ಸಹಪಾಠಿಗಳ ಜೊತೆಗೂ ಚರ್ಚಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ಸುರಭಿ. ಆದರೆ ಫಲಿತಾಂಶ ಅವರಿಗೆ ಪೂರ್ತಿ ತೃಪ್ತಿ ತಂದಿಲ್ಲ. 625 ರಲ್ಲಿ 625 ಗಳಿಸಬೇಕೆನ್ನುವುದು ಅವರ ಗುರಿಯಾಗಿತ್ತು. 1 ಅಂಕ ಕಡಿಮೆಯಾಗುವುದರೊಂದಿಗೆ ಈ ಗುರಿ ತಪ್ಪಿತು.

ಸಮಾಜ ವಿಜ್ಞಾನದಲ್ಲಿ 1 ಅಂಕ ಕಡಿಮೆಯಾದ ಕಾರಣ ಸುರಭಿಗೆ  ರಾಜ್ಯಕ್ಕೆ ಟಾಪರ್‌ ಆಗುವ ಅವಕಾಶ ಕೈತಪ್ಪಿತು.ಆದರೆ ಅವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತಾರಂತೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿ ಶಿಕ್ಷಣ ಮುಂದುವರಿಸಲು ತೀರ್ಮಾನಿಸಿದ್ದಾರೆ. ಡಾಕ್ಟರ್‌ ಆಗುವುದು ಅವರ ಗುರಿ.

 

 error: Content is protected !!
Scroll to Top