ಪರವಾನಿಗೆ ಇಲ್ಲದ ಎರಡು ಪಿಸ್ತೂಲು ವಶ: ಆರೋಪಿ ಬಂಧನ

0

ಕಡಬ, ಆ. 5 : ಪರವಾನಿಗೆ ಇಲ್ಲದೆ ಎರಡು ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ ಬುಧವಾರ ಬಂಧಿಸಿದ್ದಾರೆ.
ಕಡಬ ತಾಲೂಕು ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಜನಾರ್ದನ ಗೌಡ ಬಂಧಿತ ಆರೋಪಿಯಾಗಿದ್ದಾನೆ.ಈತನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 2 ಅಕ್ರಮ ಪಿಸ್ತೂಲ್ ಮತ್ತು 2 ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಶಿಯಂ ಕೇಪುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದ್ದು ಈತನನ್ನು ಪೊಲೀಸರು ದಸ್ತಗಿರಿ ಮಾಡಿ ಆತನ ಮೇಲೆ ಶಸ್ತ್ರಾಸ್ತಗಳ ಅಧಿನಿಯಮ ಹಾಗೂ ಸ್ಫೋಟಕಗಳ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleಪೇಜಾವರ ಶ್ರೀಗಳಿಗೆ ಭಕ್ತಿಗೌರವ ಅರ್ಪಣೆ
Next articleಮೋದಿಗೆ ಕರ್ನಾಟಕದ ಕೋದಂಡರಾಮ ಉಡುಗೊರೆ

LEAVE A REPLY

Please enter your comment!
Please enter your name here