ಪೇಜಾವರ ಶ್ರೀಗಳಿಗೆ ಭಕ್ತಿಗೌರವ ಅರ್ಪಣೆ

0

ಉಡುಪಿ, ಆ. 5: ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ಜನ್ಮಭೂಮಿ ಆಂದೋಲನದಲ್ಲಿ ಸುದೀರ್ಘ ಅವಧಿಗೆ ಮುಂಚೂಣಿಯಲ್ಲಿದ್ದು ಧೀಮಂತ ಮಾರ್ಗದರ್ಶನಗೈದ ಪೇಜಾವರ ಮಠಾಧೀಶರಾಗಿದ್ದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೀಠ‌, ಭಾವಚಿತ್ರಕ್ಕೆ ಉಡುಪಿ ಪೇಜಾವರ ಮಠದಲ್ಲಿ ಬುಧವಾರ ವಿಶೇಷ ಅಲಂಕಾರ ಮಾಡಿ‌ ಮಂಗಳಾರತಿ ಬೆಳಗಿ ಭಕ್ತಿ ಗೌರವ ಅರ್ಪಿಸಲಾಯಿತು . ಈ ಸಂದರ್ಭ ಉಪಸ್ಥಿತರಿದ್ದ ಭಕ್ತರಿಗೆ ಸಿಹಿತಿಂಡಿ ವಿತರಿಸಲಾಯಿತು. ‌ಮಠದ ದಿವಾನರಾದ ಎಂ‌ ರಘುರಾಮ ಆಚಾರ್ಯ, ಕೊಟ್ಟಾರಿಗಳಾದ ಸಂತೋಷ್, ವ್ಯವಸ್ಥಾಪಕರು, ಸಿಬಂದಿವರ್ಗದವರು ಉಪಸ್ಥಿತರಿದ್ದರು.

Previous articleಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೊರೊನಾ ಸೋಂಕು
Next articleಪರವಾನಿಗೆ ಇಲ್ಲದ ಎರಡು ಪಿಸ್ತೂಲು ವಶ: ಆರೋಪಿ ಬಂಧನ

LEAVE A REPLY

Please enter your comment!
Please enter your name here