ದಿಲ್ಲಿ, ಆ. : ಪಾಕಿಸ್ಥಾನದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಡಾನ್ ಸುದ್ದಿವಾಹಿನಿಯಲ್ಲಿ ಭಾರತದ ತ್ರಿವರ್ಣ ಧ್ವಜ ಪ್ರಸಾರವಾಗಿ ಕೋಲಾಹಲ ಉಂಟಾಗಿದೆ.
ಜಾಹೀರಾತು ಪ್ರಸಾರವಾಗುತ್ತಿದ್ದಾಗ ಮಧ್ಯದಲ್ಲಿ ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದ ಜೊತೆ ತ್ರಿವರ್ಣ ಧ್ವಜ ಕಾಣಿಸಿತು. ವೆಬ್ ಸೈಟನ್ನು ಹ್ಯಾಕ್ ಮಾಡಿ ಭಾರತದ ಧ್ವಜವನ್ನು ತೋರಿಸಲಾಗಿದೆ. ಇದು ಭಾರತದ ಹ್ಯಾಕರ್ ಗಳದ್ದೇ ಕೆಲಸ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಾನ್ ವಕ್ತಾರರು ಯಡವಟ್ಟಿಗೆ ಪ್ರತಿಕರಿಯಿಸಿದ್ದಾರೆ.
ಜಾಹೀರಾತು ಪ್ರಕಟವಾಗುತ್ತಿದ್ದಾಗ ಏಕಾಏಕಿ ಭಾರತದ ತ್ರಿವರ್ಣ ಧ್ವಜ ಕಾಣಿಸಿಕೊಂಡ ಯಡವಟ್ಟಿನಿಂದ ಡಾನ್ ವಾಹಿನಿ ವಿಪರೀತ ಮುಜುಗರಕ್ಕೊಳಗಾಗಿದೆ. ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು.
ಭಾರತದ ಧ್ವಜ ಕಾಣಿಸಿಕೊಂಡ ವೀಡಿಯೊ ವೈರಲ್ ಆಗತಪಡಗಿದೆ. ಭಾನುವಾರ ಮಧ್ಯಾಹ್ನ 3.30ರ ಹೊತ್ತಿಗೆ ಈ ಯಡವಟ್ಟು ಸಂಭವಿಸಿದೆ.