ಲೋಕೋಪಯೋಗಿ ಇಲಾಖೆಯಲ್ಲಿ 990 ಹುದ್ದೆಗಳು

ಬೆಂಗಳೂರು, ಆ. 3: ಕರ್ನಾಟಕ ಲೋಕಸೇವಾ ಆಯೋಗ ಲೋಕೋಪಯೋಗಿ ಇಲಾಖೆಯಲ್ಲಿ ಗ್ರೂಪ್ ಬಿ  ಮತ್ತು ಗ್ರೂಪ್ ಸಿ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಗ್ರೂಪ್ ಬಿ ಯಲ್ಲಿ ಸಹಾಯಕ ಇಂಜಿನಿಯರ್ (ಗ್ರೇಡ್ -1) (ಸಿವಿಲ್), ಗ್ರೂಪ್ ಸಿ ವೃಂದದಲ್ಲಿ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳಿವೆ.
ಅರ್ಜಿಗಳನ್ನು ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಒಂದೇ ಶುಲ್ಕವನ್ನು ಪಾವತಿಸಬೇಕು.

ಗ್ರೂಪ್ ಬಿ ಯಲ್ಲಿ ಸಹಾಯಕ ಇಂಜಿನಿಯರ್ (ಗ್ರೇಡ್ -1) (ಸಿವಿಲ್) ಉಳಿಕೆ ವೃಂದ 600, ಹೈ-ಕರ್ನಾಟಕ ವೃಂದ 60 ಸೇರಿ 600 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಗ್ರೂಪ್ ಸಿ ವೃಂದದಲ್ಲಿ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆ ಭರ್ತಿ ಮಾಡಲಾಗುತ್ತಿದೆ. ಉಳಿಕೆ ವೃಂದ 325, ಹೈ-ಕರ್ನಾಟಕ 5 ಸೇರಿ ಒಟ್ಟು 330 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

-ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ -2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಪ. ಜಾ., ಪ.ಪಂ, ಪ್ರವರ್ಗ -1ರ ಅಭ್ಯರ್ಥಿಗಳಿಗೆ 40 ವರ್ಷ.
-ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  16-09-2020
-website : http://www.kpsc.kar.nic.in

error: Content is protected !!
Scroll to Top