ಇಸ್ಲಾಮಾಬಾದ್ , ಆ. 3: ಗೂಢಚಾರಿಕೆ ಆರೋಪ ಹೊರಿಸಿ ಪಾಕಿಸ್ಥಾನ ಬಂಧಿಸಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಗೆ ವಕೀಲರನ್ನು ಒದಗಿಸಲು ಭಾರತಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.
ಜಾಧವ್ ಪ್ರಕರಣದ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಿದ ಹೈಕೋರ್ಟ್ ಜಾಧವ್ ಪರ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಭಾರತೀ ಅಧಿಕಾರಿಗಳಿಗೆ ಅನುಮತಿ ನೀಡಲು ಆದೇಶಿಸಿದೆ.
ಪಾಕಿಸ್ಥಾನದ ನ್ಯಾಯಾಲಯದಲ್ಲಿ ವಾದಿಸುವ ಅರ್ಹತೆಯಿರುವ ವಕೀಲರನ್ನು ನೇಮಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ಕೊಡುವಂತೆ ನ್ಯಾಯಾಲಯ ಹೇಳಿದೆ.ಆದರೆ ಭಾರತದ ವಕೀಲರು ಇಲ್ಲಿಗೆ ಬಂದು ವಾದಿಸುವ ಬಗ್ಗೆ ಏನೂ ಹೇಳಿಲ್ಲ ಎಂದು ಪಾಕ್ ಅಟಾರ್ನಿ ಜನರಲ್ ಖಾಲಿದ ಜಾವೇದ ಖಾನ್ ಹೇಳಿದ್ದಾರೆ.