ಕಾರ್ಕಳದಲ್ಲಿ ಸೋಮವಾರ ಭಾರಿ ಮಳೆ

ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಸೋಮವಾರ ಭಾರಿ ಮಳೆಯಾಗುತ್ತಿದ್ದು, ನದಿ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಕಾರ್ಕಳ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಾತಾವರಣ ತಂಪಾಗಿದೆ. ರವಿವಾರ ಸಾಧಾರಣ ಮಳೆಯಾಗಿದ್ದು, ಸೋಮವಾರ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ರವಿವಾರ ಕಾರ್ಕಳದಲ್ಲಿ 43.6 ಮಿ.ಮೀ., ಇರ್ವತ್ತೂರು-34.2 ಮಿ.ಮೀ., ಅಜೆಕಾರು-52.4ಮಿ.ಮೀ., ಬೆಳಂಜೆ-40.8 ಮಿ.ಮೀ., ಸಾಣೂರು-41.8 ಮಿ.ಮೀ., ಕೆದಿಂಜೆ-49.2 ಮಿ.ಮೀ., ಮುಳಿಕ್ಕಾರು-45.4 ಮಿ.ಮೀ., ಕೆರ್ವಾಶೆ-48.2 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಸಂದರ್ಭ ವರುಣನ ಆರ್ಭಕ್ಕೆ ಹಲವು ಪ್ರದೇಶಗಳು ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿತ್ತು. ಆದರೆ ಈ ಬಾರಿ ನಿರಂತರವಾಗಿ ಮಳೆ ಸುರಿಯುತ್ತಿದ್ದಾಗ್ಯೂ ಮಳೆ ಹಾನಿ ಕುರಿತು ವರದಿಯಾಗಿಲ್ಲ.

 













































error: Content is protected !!
Scroll to Top