ದಿಲ್ಲಿ,ಆ. 2: ದೇಶದಲ್ಲಿ ಕಳೆದ 24 ತಾಸುಗಳಲ್ಲಿ 54,736 ಮಂದಿಯಲ್ಲಿ ವೈರಸ್ ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 17,50,724ಕ್ಕೆ ಏರಿಕೆಯಾಗಿದೆ
ಶನಿವಾರ ಒಂದೇ ದಿನ 853 ಮಂದಿ ಮಹಾಮಾರಿ ವೈರಸ್ ಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 37,364ಕ್ಕೆ ಏರಿಕೆಯಾಗಿದೆ.
17,50,724 ಮಂದಿ ಸೋಂಕಿತರ ಪೈಕಿ 11,45,630 ಮಂದಿ ಗುಣಮುಖರಾಗಿದ್ದು, 5,67,730 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿರುವ ಹೊರತಾಗಿಯೂ ಸಾವಿನ ಪ್ರಮಾಣ ಶೇ.2.15ಕ್ಕೆ ಇಳಿದಿದೆ. ಅಂದರೆ 100 ಜನ ಸೋಂಕಿತರಲ್ಲಿ ಸರಾಸರಿ 2.15 ಜನರು ಮಾತ್ರವೇ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.