ಲಿಪುಲೇಖ್‌ನಲ್ಲಿ ಚೀನ ಸೇನೆ ಜಮಾವಣೆ  

ದಿಲ್ಲಿ, ಆ.2 : ಲಡಾಖ್‌ ಗಡಿಯಲ್ಲಿ ಸೇನೆ ಜಮಾವಣೆ ಮಾಡಿ ಮುಖಭಂಗ ಅನುಭವಿಸಿದ್ದರೂ ಚೀನ ಬುದ್ಧ ಕಲಿತುಕೊಂಡಿಲ್ಲ. ಲಡಾಖ ಗಡಿಯಿಂದ  ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಲೇ ಮತ್ತೊಂದು ಕಡೆ ಉತ್ತರಾಖಂಡದ ಲಿಪುಲೇಖ್ ಬಳಿ ಭಾರಿ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿದೆ. ಸುಮಾರು ಮೂರು ತಿಂಗಳಿಂದ ಲಡಾಖ್ ಗಡಿಯ ಬಳಿ ಭಾರತ-ಚೀನ  ನಡುವೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಿಗುವಿನ ಪರಿಸ್ಥಿತಿ ತಗ್ಗಿಸಲು ಉಭಯ ದೇಶಗಳ ನಡುವೆ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.ಚರ್ಚೆಯ ಫಲವಾಗಿ ತನ್ನ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಚೀನ  ಪ್ರಕಟಿಸಿದೆ. ಆದರೆ, ಈ ಹೇಳಿಕೆ  ಮರೆಯುವ ಮುನ್ನವೇ ತನ್ನ ವಕ್ರ ಬುದ್ಧಿಯನ್ನು ತೋರಿಸಿದೆ. ಲಿಪುಲೇಖ್, ಪ್ರದೇಶ, ಸಿಕ್ಕಿಂನ ಉತ್ತರ ಪ್ರದೇಶಲ್ಲಿರುವ ಭಾರತ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ತನ್ನ ಸೇನೆಯ ಜಮಾವಣೆ ಆರಂಭಿಸಿದೆ ಎಂದು ಭಾರತದ ಉನ್ನತ ಸೇನಾಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಭಾರತ ಕೂಡಾ ತನ್ನ ಸೇನಾ ಪಡೆಗಳನ್ನೂ ಅಲ್ಲಿಗೆ ರವಾನಿಸಲಾಗುತ್ತಿದೆ.ಚೀನ, ನೇಪಾಳ ವಿರುದ್ಧವೂ ದೃಷ್ಟಿ ಹರಿಸಿದೆ ಎಂದು ವಿವರಿಸಿದ್ದಾರೆ.

error: Content is protected !!
Scroll to Top