ಭೂ ಸೇನೆಯಲ್ಲಿ 40 ಹುದ್ದೆಗಳು

ಭಾರತೀಯ ಭೂಸೇನೆಯಲ್ಲಿ 2020ನೇ ಸಾಲಿನ ನೇಮಕಾತಿ ಆರಂಭವಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 132ನೇ ತಾಂತ್ರಿಕ ಪದವಿ ಕೋರ್ಸ್(ಟಿಜಿಸಿ) ಅಡಿಯಲ್ಲಿ ಆಯ್ಕೆಯಾಗಲು ಅರ್ಜಿ ಆಹ್ವಾನಿಸಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ಭಾರತೀಯ ಸೇನೆ

ಹುದ್ದೆ ಹೆಸರು: 132nd Technical Graduate Course

ಒಟ್ಟು ಹುದ್ದೆ: 40

ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 26, 2020

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ, ಸಿವಿಎಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಏರೋಸ್ಪೇಸ್, ಟೆಲಿಕಮ್ಯೂನಿಕೇಷನ್… ಇತ್ಯಾದಿ

ವಯೋಮಿತಿ: ಕನಿಷ್ಠ 20 ರಿಂದ ಗರಿಷ್ಠ 27

ನೇಮಕಾತಿ: ಅವಿವಾಹಿತ, ಪುರುಷ ಅಭ್ಯರ್ಥಿಗಳಿಗೆ ಆದ್ಯತೆ, ಅರ್ಹತೆ, ವೈಯಕ್ತಿಕ ಸಂದರ್ಶನ, ದೈಹಿಕ, ವೈದ್ಯಕೀಯ ಪರೀಕ್ಷೆ

ಪ್ರಮುಖ ದಿನಾಂಕ:

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ : ಜುಲೈ 28, 2020

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 26, 2020

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ತಾಣದ ಲಿಂಕ್ https://joinindianarmy.nic.in/   ಕ್ಲಿಕ್‌ ಮಾಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

error: Content is protected !!
Scroll to Top