ದಿಲ್ಲಿ, ಜು. 29: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ವದಂತಿಗಳು ಹರಡಿರುವಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರು ದಿಲ್ಲಿಗೆ ಹೋದದ್ದು ವ ವದಂತಿಗಳಿಗೆ ರೆಕ್ಕೆಪುಕ್ಕ ಹುಟ್ಟಲು ಕಾರಣವಾಗಿತ್ತು. ಈ ಕುರಿತು ದಿಲ್ಲಿಯಿಂದಲೇ ಸ್ಪಷ್ಟೀಕರಣ ನೀಡಿರುವ ಜೊಲ್ಲೆಯವರು ನಾನು ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ದಿಲ್ಲಿಗೆ ಬಂದಿದ್ದೇನೆ. ಸಂಪುಟ ಪುನಾರಚನೆಗೂ ಈ ಭೇಟಿಗೂ ಸಂಬಂಧ ಇಲ್ಲ ಎಂದಿದ್ದಾರೆ.
ಸಂಪುಟ ಪುನಾರಚನೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸೇರಿ ಕೆಲ ಸಚಿವರನ್ನ ಕೈಬಿಡಲಿದ್ದಾರೆಂಬ ಸುದ್ದಿ ಹರಡಿತ್ತು. ಈ ಕುರಿತು ಮಾತನಾಡಿದ ಸಚಿವೆ ನನ್ನನ್ನು ಸಚಿವ ಸಂಪುಟದಿಂದ ಕೈಬಿಡಲ್ಲ. ನನ್ನನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಎಂದಿದ್ದಾರೆ.
ಶಶಿಕಲಾ ಜೊಲ್ಲೆ ಸಚಿವ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನು ಅವರು ಕಾಗೆ ಕುಳಿಗಾಗ ಕೊಂಬೆ ಮುರಿದ ನುಡಿಕಟ್ಟಿಗೆ ಹೋಲಿಸಿದ್ದಾರೆ.