ಕಾರ್ಕಳ ಜು:28: ಕಾರ್ಕಳ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 11 ರಲ್ಲಿ ನಗರ ಬಿಜೆಪಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜು. 28ರಂದು ನಡೆಯಿತು. ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ, ಗಿಡಗಳನ್ನು ನೆಡುವುದು ಮಾತ್ರವಲ್ಲ ಅವುಗಳನ್ನು ಚೆನ್ನಾಗಿ ಬೆಳೆಸಿ ಮರವಾಗುವ ತನಕ ಆರೈಕೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದರು.
ಪುರಸಭಾ ಸದಸ್ಯರಾದ ಸುಮಾ ಕೇಶವ್, ಭಾರತಿ ಅಮೀನ್, ಮಾಜಿ ಪುರಸಭಾ ಸದಸ್ಯ ರವೀಂದ್ರ ಮೊಯಿಲಿ, 11ನೇ ವಾರ್ಡ್ ಅಧ್ಯಕ್ಷರಾದ ಅಭಿಲಾಷ್ ಪಡ್ಕೆ, ರಮೇಶ್ ಶೆಟ್ಟಿ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.