ಇನ್ನು appನಲ್ಲಿ ಸಿಗಲಿದೆ ಅಟೊರಿಕ್ಷಾ : ನಿಟ್ಟೆ ವಿದಾರ್ಥಿಗಳು ಅಭಿವೃದ್ಧಿಪಡಿಸಿದ ಹೊಸ app auto please

 

-ನಿಲ್ದಾಣದಲ್ಲಿರುವ ಅಟೊರಿಕ್ಷಾದ ಪಟ್ಟಿ, ಚಾಲಕನ ವಿವರ appನಲ್ಲೇ ಇಭ್ಯ

-appನಿಂದಲೇ ಚಾಲಕನಿಗೆ ಕರೆ ಮಾಡುವ ಸೌಲಭ್ಯ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ‘ಆಟೋ ಪ್ಲೀಸ್’ ಎಂಬ ವಿನೂತನ ಎಪ್ಲಿಕೇಶನ್‌ ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪರಿಚಯಿಸಿದೆ. ಈ ಎಪ್ಲಿಕೇಶನ್‍ನ ಮೂಲಕ ಸಾರ್ವಜನಿಕರು ತಮ್ಮ ಸಮೀಪದ ರಿಕ್ಷಾ ನಿಲ್ದಾಣವನ್ನು ಅಯ್ಕೆ ಮಾಡಿದಲ್ಲಿ, ಅಲ್ಲಿ ಸಂಚಾರಕ್ಕೆ ಲಭ್ಯವಿರುವ ಆಟೋರಿಕ್ಷಾಗಳ ಪಟ್ಟಿಯು ದೊರೆಯುತ್ತದೆ. ಇದರೊಂದಿಗೆ ಚಾಲಕನ ಹೆಸರು, ಭಾವಚಿತ್ರ, ಲೈಸನ್ಸ್ ಮುಂತಾದ ವಿವರಗಳನ್ನು ಪರಿಶೀಲಿಸಬಹುದು. ಪಟ್ಟಿಯಲ್ಲಿ ಇರುವ ಚಾಲಕರ ಮಾಹಿತಿಯನ್ನು ಗಮನಿಸಿ ಆ ರಿಕ್ಷಾ ಚಾಲಕನಿಗೆ ಕರೆಮಾಡುವ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದೆ. ಗ್ರಾಹಕರು ಈ ಎಪ್ಲಿಕೇಶನ್‍ನಲ್ಲಿ ನೋಂದಾವಣಿ ಮಾಡಬೇಕಾಗಿಲ್ಲ ಎನ್ನುವುದು ಇದು  ಗ್ರಾಹಕ ಸ್ನೇಹಿ ಎಪ್ಲಿಕೇಶನ್ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಈ ಎಪ್ಲಿಕೇಶನ್ ಉಚಿತವಾಗಿದ್ದು, ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕಂಪ್ಯೂಟರ್‍ ಸಯನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ವೇಣುಗೋಪಾಲ ಪಿ.ಎಸ್. ಅವರ ಮಾರ್ಗದರ್ಶನದಲ್ಲಿ ಚಿಂತನ್ ಹಾಗೂ ದ್ವನಿತ್ ಎಂಬ ಇಬ್ಬರು ಬಿ.ಇ. ಪದವಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಈ ಎಪ್ಲಿಕೇಶನ್ ಕಾರ್ಕಳ ಹಾಗೂ ನಿಟ್ಟೆ ಪರಿಸರದಲ್ಲಿ ಅತಿಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಪ್ಲಿಕೇಶನ್‍ನನ್ನು ಡೌನ್ಲೋಡ್ ಮಾಡಲು https://play.google.com/store/apps/details?id=chinthan.autoplease ಲಿಂಕ್ ಬಳಸಬಹುದಾಗಿದೆ.

error: Content is protected !!
Scroll to Top