ಕೊರೊನಾ ವಾರಿಯರ್ಸ್‌ಗೆ ಅಭಯʼದಾನʼ –ಎರಡು ಕಾರು ಕೊಟ್ಟ ಮಾಜಿ ಸಚಿವ

ಮೂಡುಬಿದಿರೆ: ಮಾಜಿ ಸಚಿವ ,ಕಾಂಗ್ರೆಸ್‌ನ ಹಿರಿಯ ನಾಯಕ ಅಭಯಚಂದ್ರ ಜೈನ್‌ ಅವರು ತನ್ನ ಎರಡು ಕಾರುಗಳನ್ನು ಕೊರೊನಾ ವಾರಿಯರ್ಸ್ಗಳ ಬಳಕೆಗಾಗಿ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಗೆ ನೀಡಿ ಆದರ್ಶ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಕೊರೊನಾ ಶುಶ್ರೂಷೆಯಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ವಿಪರೀತ ಓಡಾಟ ನಡೆಸಬೇಕಾಗುತ್ತದೆ.ಎಷ್ಟೋ ಸಂದರ್ಭಗಳಲ್ಲಿ ಸಮರ್ಪಕ ವಾಹನ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಹೋದ ಘಟನೆಗಳು ವರದಿಯಾಗಿದ್ದವು. ಕೊರೊನಾ ವಾರಿಯರ್ಸ್‌ ಬವಣೆಯನ್ನು ಕಂಡು ಆಭಯಚಂದ್ರ ಜೈನ್‌ ತನ್ನ ಎರಡು ಐಷರಾಮಿ ಕಾರುಗಳನ್ನೇ ನೀಡಿದ್ದಾರೆ. ಕಳೆದ 15 ದಿನಗಳಿಂದ ಎರಡು ಕಾರುಗಳು ಸರಕಾರಿ ಆಸ್ಪತ್ರೆಯ ಸಿಬಂದಿಯ ಸೇವೆಯಲ್ಲಿವೆ.

ಹಾಗೆಂದು ಅಭಯಚಂದ್ರ ಜೈನ್‌ ತಮ್ಮ ಕಾರನ್ನು ಕೊರೊನಾ ವಾರಿಯರ್ಸ್‌ ಗೆ ಕೊಟ್ಟಿರುವುದು ಇದೇ ಮೊದಲೇನಲ್ಲ. ಮಾರ್ಚ್‌ನಲ್ಲಿ ,ಲಾಕ್‌ಡೌನ್‌ ಜಾರಿಯಲ್ಲಿರುವಾಗಲೂ ಕೊರೊನಾ ವಾರಿಯರ್ಸ್ ಗೆ ಕಾರು ಕೊಟ್ಟಿದ್ದರು.

error: Content is protected !!
Scroll to Top