24 ತಾಸುಗಳಲ್ಲಿ 45,720 ಕೊರೊನಾ ಪೊಸಿಟಿವ್‌ ದೃಢ –12 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ದಿಲ್ಲಿ :  ದೇಶದಲ್ಲಿ ಕೊರೊನಾ ತಾಂಡವ ಅವ್ಯಾಹತವಾಗಿ ಮುಂದುವರಿದಿದೆ. ಒಂದೆಡೆ ಸೋಂಕು ಪತ್ತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ  ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ಬೆಳಕಿಗೆ ಬರುತ್ತಿವೆ. . ಗುರುವಾರ ದೇಶದಾದ್ಯಂತ ದಾಖಲೆಯ 45,720 ಹೊಸ ಸೋಂಕಿತರು ಪತ್ತೆಯಾಗಿ ಒಟ್ಟು ಸೋಂಕಿತರ ಸಂಖ್ಯೆ 12,38,635 ತಲುಪಿದೆ. 

ಮತ್ತೊಂದೆಡೆ 1,129 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 29,861ಕ್ಕೆ ಮುಟ್ಟಿದೆ. ಈ ನಡುವೆ 12,38,635 ಮಂದಿ ಸೋಂಕಿತರ ಪೈಕಿ 7,82,606 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿನ್ನೂ 4,26,167 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಮಹಾರಾಷ್ಟ್ರದಲ್ಲಿ ಬುಧವಾರ ದಾಖಲೆಯ 10574 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ337607ಕ್ಕೆ ತಲುಪಿದೆ. ರಾಜ್ಯವೊಂದರಲ್ಲಿ ಒಂದೇ ದಿನ 10,000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದೇ ಮೊದಲು. ಮಹಾರಾಷ್ಟ್ರದಲ್ಲಿ ನಿನ್ನೆ 280 ಜನರು ಸಾವನ್ನಪ್ಪಿದ್ದಾರೆ. 

ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಬುದವಾರ ದಾಖಲೆಯ ಪ್ರಮಾಣದ ಹೊಸ ಸೋಂಕು ದೃಢಪಟ್ಟಿದೆ. ನಿನ್ನೆ ಆಂಧ್ರದಲ್ಲಿ  ದಾಖಲೆಯ 6045 ಸೋಂಕು 65 ಸಾವು, ತಮಿಳುನಾಡಿನಲ್ಲಿ 5845 ಸೋಂಕು 74 ಸಾವು, ಕರ್ನಾಟಕದಲ್ಲಿ 4764 ಸೋಂಕು, 55 ಸಾವು, ಕೇರಳದಲ್ಲಿ 1038 ಹೊಸ ಕೇಸು ದೃಢಪಟ್ಟಿದೆ. ಈ ನಾಲ್ಕೂ ರಾಜ್ಯಗಳಲ್ಲೂ ಬುಧವಾರದ ಸೋಂಕಿನ ಪ್ರಮಾಣ ಈ ವರೆಗಿನ ದೈನಂದಿನ ಗರಿಷ್ಠವಾಗಿದೆ. 













































































































































































error: Content is protected !!
Scroll to Top