ಕೋಲ್ಕೊತಾ: ಭಾರತದ ಮಾಜಿ ಫುಟ್ ಬಾಲ್ ಆಟಗಾರ ಮೆಹ್ತಾಬ್ ಹುಸೇನ್ ಭಾರತೀಯ ಜನತಾ ಪಕ್ಷ ಸೇರಿ 24 ತಾಸುಗಳಲ್ಲೇ ರಾಜಕೀಯಕ್ಕೇ ಗುಡ್ ಬೈ ಹೇಳಿ ಅಚ್ಚರಿಯುಂಟು ಮಾಡಿದ್ದಾರೆ.
ಮಿಡ್ ಫೀಲ್ಡ್ ಜನರಲ್ ಎಂದೇ ಖ್ಯಾತರಾಗಿದ್ದ ಹುಸೇನ್ ತಾವು ಬಿಜೆಪಿ ತೊರೆದ ಬಳಿಕ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಇದು ತಮ್ಮ ವೈಯಕ್ತಿಕ ನಿರ್ಧಾರವಾಗಿದ್ದು ನನ್ನ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಹಸೇನ್ ಬಿಜೆಪಿ ಪಕ್ಷ ಸೇರಿದ ನಂತರ ಅವರ ಕೆಲವು ಸ್ನೇಹಿತರು ಮತ್ತು ಕುಟುಂಬಸ್ಥರು ಹಾಗೂ ಹಿತೈಷಿಗಳು ನೋವಿನಿಂದ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದ್ದರು ಈ ಕಾರಣಕ್ಕೆ ಅವರು ಬಿಜೆಪಿ ತೊರೆದಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ಮೆಹ್ತಾಬ್ ಹುಸೇನ್ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಶ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದರು.
“ನಾನು ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನನ್ನ ಈ ನಿರ್ಧಾರಕ್ಕಾಗಿ ನನ್ನ ಎಲ್ಲ ಹಿತೈಷಿಗಳ ಕ್ಷಮೆಯಾಚಿಸುತ್ತೇನೆ ಎಂದು ಹುಸೇನ್ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳಲು ಯಾರೂ ನನ್ನ ಮೇಲೆ ಒತ್ತಡ ಹಾಕಿಲ್ಲ, ಇದು ನನ್ನ ವಯಕ್ತಿಕ ನಿರ್ಧಾರ ಎಂದು ಸ್ಪಷ್ಟ ಪಡಿಸಿದ್ದಾರೆ.”