ಕೊರೊನಾ ನಡುವೆಯೂ ಈ ಸಲ ಪೂರ್ಣ ಪ್ರಮಾಣದ ಐಪಿಎಲ್‌

ಮುಂಬಯಿ :ಅಂತೂ ಇಂತೂ ಈ ಸಲ ಐಪಿಎಲ್‌ ನಡೆಯುವುದು ಖಾತರಿಯಾಗಿದೆ. ಆದರೆ ಅದರ ಸ್ವರೂಪ ಗೇಗಿರಬಹುದು ಎಂಬ ಅಂದಾಜು ಇನ್ನೂ ಯಾರಿಗೂ ಇಲ್ಲ. ಫುಲ್ ಮ್ಯಾಚ್ ಇರುತ್ತಾ? ಅಥವಾ ಸಮಯದ ಅಭಾವದ ಕಾರಣ ಪಂದ್ಯಗಳನ್ನು ಕಡಿತ ಮಾಡಲಾಗುತ್ತಾ? ಇತ್ಯಾದಿ ಅನುಮಾನಗಳು ಅಭಿಮಾನಿಗಳಲ್ಲಿದೆ.

ಇದಕ್ಕೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉತ್ತರಿಸಿದ್ದಾರೆ. ಈ ಬಾರಿ ಐಪಿಎಲ್ ಸಂಪೂರ್ಣ ಪಂದ್ಯಗಳು ನಡೆಯಲಿವೆ. ಒಟ್ಟಾರೆ 60 ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶ  ಸಿಗುವ ಸಾಧ್ಯತೆ ಕಡಿಮೆ. ಆದರೆ ನೇರಪ್ರಸಾರಕ್ಕೆ ತೊಂದರೆಯಿಲ್ಲ.
 
ಇನ್ನು ಉಳಿದಂತೆ ಫೈನಲ್ ವೇಳಾಪಟ್ಟಿ, ಪಂದ್ಯ ನಡೆಯುವ ಸಮಯ, ದಿನಾಂಕಗಳ ಕುರಿತು ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

Latest Articles

error: Content is protected !!