ದಿಲ್ಲಿ : ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ 18% ಜಿಎಸ್ಟಿ ವಿಧಿಸಲಾಗುವುದು ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಹೇಳಿದೆ. ತಯಾರಿಸಲ್ಪಟ್ಟ ಹ್ಯಾಂಡ್ ಸ್ಯಾನಿಟೈಸರ್ಗಳು ‘ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್’ಗಳ ವರ್ಗಕ್ಕೆ ಸೇರಿದ್ದು, 18% ಜಿಎಸ್ಟಿ ಅನ್ವಯವಾಗುತ್ತದೆ ಎಂದು ಎಎಆರ್ ತನ್ನ ತೀರ್ಪಿನಲ್ಲಿ ಹೇಳಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ಸರಕು ಎಂದು ವರ್ಗೀಕರಿಸಿದ್ದರೂ, ಜಿಎಸ್ಟಿ ಕಾನೂನಿನಲ್ಲಿ ವಿನಾಯಿತಿ ಪಡೆದ ಸರಕುಗಳ ಪ್ರತ್ಯೇಕ ಪಟ್ಟಿ ಇದೆ ಎಂದು ಪ್ರಾಧಿಕಾರ ಹೇಳಿದೆ.
ಹ್ಯಾಂಡ್ ಸ್ಯಾನಿಟೈಸರ್ಗಳ ವರ್ಗೀಕರಣವು ಪ್ರಾರಂಭದಿಂದಲೂ ಚರ್ಚೆಯ ವಿಷಯವಾಗಿದೆ,