ಟ್ರಂಪ್ ವಿರುದ್ಧ ಅಮೆರಿಕದ 17 ಕಂಪನಿಗಳಿಂದ ಮೊಕದ್ದಮೆ

0

ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿಯುವುದನ್ನು ತಡೆಯುವ ಟ್ರಂಪ್ ಆಡಳಿತದ ಇತ್ತೀಚಿನ ಹೊಸ ನೀತಿಯ ವಿರುದ್ಧ ಹಾರ್ವಡ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸಲ್ಲಿಸಿರುವ ಮೊಕದ್ದಮೆಗೆ ಇದೀಗ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ತಂತ್ರಜ್ಞಾನ ಕಂಪನಿಗಳು ಕೂಡಾ ಸೇರಿಕೊಂಡಿವೆ.

ವಾಷಿಂಗ್ಟನ್: ಕನಿಷ್ಠ ಒಂದು ವೈಯಕ್ತಿಕ ಕೋರ್ಸ್ ನಲ್ಲಿ  ( ಒನ್-ಇನ್- ಪರ್ಸನ್  ಕೋರ್ಸ್ ) ಪಾಲ್ಗೊಳ್ಳದ ಹೊರತು ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿಯುವುದನ್ನು ತಡೆಯುವ ಟ್ರಂಪ್ ಆಡಳಿತದ ಇತ್ತೀಚಿನ ಹೊಸ ನೀತಿಯ ವಿರುದ್ಧ ಹಾರ್ವಡ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸಲ್ಲಿಸಿರುವ ಮೊಕದ್ದಮೆಗೆ ಇದೀಗ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ತಂತ್ರಜ್ಞಾನ ಕಂಪನಿಗಳು ಸೇರಿಕೊಂಡಿವೆ.

ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ವಿದೇಶಿ ಪ್ರಯಾಣವನ್ನು ತಡೆಯುವ ಪ್ರಯತ್ನದ ಭಾಗವಾಗಿ ಟ್ರಂಪ್ ಆಡಳಿತ ಘೋಷಿಸಿರುವ ವಿದೇಶಿ ವಿದ್ಯಾರ್ಥಿಗಳಿಗೆ ಹೊಸ ತಾತ್ಕಾಲಿಕ ವೀಸಾ ನೀತಿಯ ವಿರುದ್ಧ ನ್ಯೂಜೆರ್ಸಿ, ಕೊಲೊರಾಡೊ
ಮತ್ತಿತರ ಕೊಲಂಬಿಯಾ ಜಿಲ್ಲೆಗಳು ಸೇರಿದಂತೆ  ಅಮೆರಿಕಾದ 17 ರಾಜ್ಯಗಳು ಮತ್ತೊಂದು ಮೊಕದ್ದಮೆಯನ್ನು ಹೂಡುತ್ತಿವೆ.

ಅಮೆರಿಕಾದ ವ್ಯವಹಾರದಲ್ಲಿ  ಅರ್ಧಕ್ಕೂ ಹೆಚ್ಚಿನ ವಿದೇಶಿ ವಿದ್ಯಾರ್ಥಿಗಳ ನೇಮಕವನ್ನು ತಡೆಯುವುದರಿಂದ ಇಡೀ ಆರ್ಥಿಕತೆ ಹಾಗೂ ಕಂಪನಿಗಳಿಗೆ ನಷ್ಟವಾಗಲಿದೆ.ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಉಳಿಯುವ ಮೊದಲಿನ ನೀತಿಗಳಿಗೆ ಆದ್ಯತೆ ನೀಡಬೇಕೆಂದು ಕಂಪನಿಗಳು ಆಗ್ರಹಿಸಿವೆ.

ಅಮೆರಿಕಾದ ವ್ಯವಹಾರಕ್ಕಾಗಿ ವಿದೇಶಿ ವಿದ್ಯಾರ್ಥಿಗಳು ಪ್ರಮುಖ ಉದ್ಯೋಗದ ಮೂಲವಾಗಿದ್ದಾರೆ. ವಿದೇಶಿ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಉಳಿದರೂ ಅಥವಾ ಅವರ ಸ್ವ ದೇಶಗಳಿಗೆ ಮರಳಿದರೂ ಪ್ರಮುಖ ನೌಕರರು ಅಥವಾ ಗ್ರಾಹಕರಾಗಿ ವ್ಯವಹಾರದಲ್ಲಿ  ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಕಂಪನಿಗಳು ಹೇಳಿವೆ.

ಅಮೆರಿಕಾದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದು, ನಗರದಲ್ಲಿರುವ ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಐಟಿ ಕಂಪನಿಗಳು ಹೇಳಿವೆ. 

ಹೋಮ್ ಲ್ಯಾಂಡ್ ಸೆಕ್ಯೂರಿಟಿ ಇಲಾಖೆ, ಅಮೆರಿಕಾದ ಐಸಿಇ  ವಿರುದ್ಧ ಮ್ಯಾಸಚೂಸೆಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ದೂರನ್ನು ಕಂಪನಿಗಳು ದಾಖಲಿಸಿವೆ. ವಿದೇಶಿ ವಿದ್ಯಾರ್ಥಿಗಳನ್ನು ಹೊರಹಾಕಲು ಅಕ್ರಮ, ಕ್ರೂರ ನೀತಿಯನ್ನು ಫೆಡರಲ್ ಸರ್ಕಾರ ಜಾರಿಗೆ ತಂದಿವೆ ಎಂದು 18 ಅಟಾರ್ನಿ ಜನರಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Previous articleಬಿಜೆಪಿ ಸೇರುತ್ತಿಲ್ಲ : ಸಚಿನ್ ಪೈಲಟ್ ಸ್ಪಷ್ಟನೆ
Next articleಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ 18% ಜಿಎಸ್ ಟಿ

LEAVE A REPLY

Please enter your comment!
Please enter your name here