ಆ. 14 : ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌ ಉದ್ಘಾಟನೆ

ಕಾರ್ಕಳ : ಜೋಡುರಸ್ತೆಯ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಕೆಳ ಮಹಡಿ ಮತ್ತು ಎರಡನೇ ಮಹಡಿಯಲ್ಲಿ ಆ.14ರಂದು ಬೆಳಿಗ್ಗೆ 10.30ಕ್ಕೆ ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌ ಶುಭಾರಂಭಗೊಳ್ಳಲಿದೆ. ಒಂದೇ ಸೂರಿನಡಿ ಎಲ್ಲಾ ಗೃಹೋಪಯೋಗಿ ಉತ್ಪನ್ನಗಳು ಲಭ್ಯವಿದ್ದು, ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ ಲಭ್ಯವಿದೆ ಎಂದು ಎನ್‌ಪಿ ಸಮೂಹ ಸಂಸ್ಥೆಯ ಅಧ್ಯಕ್ಷ ವಾಸುದೇವ ಭಟ್‌ ತಿಳಿಸಿದ್ದಾರೆ.
ಅವರು ಈ ಬಗ್ಗೆ ಆ. 11ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ವಿಶೇಷ ಆಫರ್‌
ಆ. 14ರಿಂದ ಆ. 25ರವರೆಗೆ ವಿಶೇಷ ಆಫರ್‌ಗಳಿವೆ ನಡೆಯಲಿದೆ. ಗಿಫ್‌ ಹ್ಯಾಂಪರ್‌ಗಳು, ಪ್ರತಿ ಖರೀದಿಗೆ ಗಿಫ್ಟ್‌ ಕೂಪನ್‌, 10 ಸಾವಿರದಿಂದ 25 ಸಾವಿರದವೆರೆಗಿನ ಖರೀದಿಗೆ 1,500 ರೂ. ವರೆಗಿನ ಗಿಫ್ಟ್‌, 50 ಸಾವಿರವರೆಗಿನ ಖರೀದಿಗೆ 2,500 ರೂ. ಯ ಗಿಫ್ಟ್‌, 75 ಸಾವಿರದವರೆಗಿನ ಖರೀದಿಗೆ 3,500 ರೂ.ಯ ಗಿಫ್ಟ್‌, 75 ಸಾವಿರಕ್ಕೂ ಮೇಲ್ಪಟ್ಟು ಖರೀದಿಸಿದಲ್ಲಿ 5 ಸಾವಿರ ರೂ. ವರೆಗಿನ ಗಿಫ್ಟ್‌ಗಳನ್ನು ನೀಡಲಾಗುವುದು. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಮತ್ತು ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿ, ಉತ್ಸಾಹಿ ಯುವ ಉದ್ಯಮಿ ವಾಸುದೇವ್‌ ಭಟ್‌ ಅವರ ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌ ಉತ್ತಮ ಗುಣಮಟ್ಟದ ಕಾರ್ಕಳದಲ್ಲಿ ಈವರೆಗೆ ಇಲ್ಲದ ಹೊಸ ಉತ್ಪನ್ನಗಳನ್ನು ಜನತೆಗೆ ಪರಿಚಯಿಸಲಿದೆ ಎಂದು ಹೇಳಿದರು.

ಫೆಡರೇಷನ್‌ ಆಫ್‌ ಕರ್ನಾಟಕ ರಾಜ್ಯ ಕ್ವಾರಿ ಆಂಡ್‌ ಕ್ರಶರ್ಸ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಜೋಡುರಸ್ತೆಯಲ್ಲಿ ಆಧುನಿಕ ವ್ಯವಸ್ಥೆಯೊಂದಿಗೆ ರೂಪುಗೊಂಡ ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌ ಜನತೆಗೆ ಉತ್ತಮ ಸೇವೆ ಒದಗಿಸಲಿದೆ ಎಂದು ಹೇಳಿದರು.

ಅಮ್ಮನ ನೆರವು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಅವಿನಾಶ್‌ ಶೆಟ್ಟಿ ಮಾತನಾಡಿ, ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌ಗೆ ಜನತೆ ಸಹಕರಿಸಬೇಕು. ಉತ್ತಮ ಗ್ರಾಹಕ ಸೇವೆಯೊಂದಿಗೆ ಎನ್.ಪಿ ಎಲೆಕ್ಟ್ರಾನಿಕ್ಸ್ ಉಡುಪಿ ಮಂಗಳೂರಿನಲ್ಲಿಯೂ ಪ್ರಾರಂಭಿಸುವಂತಾಗಬೇಕು ಎಂದರು.

ಸಭಾ ಕಾರ್ಯಕ್ರಮ
ಆ. 14ರಂದು ಬೆಳಿಗ್ಗೆ 11 ಗಂಟೆಗೆ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರವೀಂದ್ರ ಪ್ರಭು ಕಡಾರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿರುವರು. ಮಾಜಿ ಶಾಸಕ ರಘುಪತಿ ಭಟ್‌ ಕೆಳ ಮಹಡಿ ಮಳಿಗೆಯ ಉದ್ಘಾಟನೆ, ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಎರಡನೇ ಮಹಡಿ ಮಳಿಗೆ ಉದ್ಘಾಟನೆ, ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್‌ ಎಸ್.‌ ಎಲ್.‌ ವೆಬ್‌ಸೈಟ್‌ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಪ್ರಸನ್ನ ಕುಮಾರ್‌, ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ ಕಣಜಾರು, ಕಾರ್ಕಳ ಬಿಲ್ಲವ ಸಮಾಜ ಸಂಘ ಅಧ್ಯಕ್ಷ ಪ್ರಮಲ್‌ ಕುಮಾರ್‌, ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂತೋಷ್‌ ರಾವ್‌ ಹಾಗು ಜಾನ್ಸ್‌ ಸ್ಪೋರ್ಟ್ಸ್‌ ಅಕಾಡೆಮಿಯ ಅಧ್ಯಕ್ಷ ಜಾನ್‌ ಡಿʼಸಿಲ್ವಾ ಭಾಗಿಯಾಗಲಿದ್ದಾರೆ.







































































































































error: Content is protected !!
Scroll to Top