ತಾಲೂಕು ಮಟ್ಟದ ಪುರುಷರ ಹಗ್ಗಜಗ್ಗಾಟ
ಕಾರ್ಕಳ : ಕೌಡೂರು ಯುವ ಸಂಗಮ ವತಿಯಿಂದ 4ನೇ ವರ್ಷದ ಕೆಸರ್‌ದ ಕಸರತ್ತ್ ಕಾರ್ಯಕ್ರಮ ಆ. 15ರಂದು ಕೌಡೂರು ಬಾಣಾಲ್ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಸ್ಥಾನದ ಮುಂಭಾಗದ ಗದ್ದೆಯಲ್ಲಿ ನೆರವೇರಲಿದೆ. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಸ್ಪರ್ಧೆಗಳು ನಡೆಯಲಿದೆ. ಈ ಸಂದರ್ಭ ಪ್ರಗತಿ ಪರ ಕೃಷಿಕ ಸುಧಾಕರ್ ಪೂಜಾರಿಯವರನ್ನು ಸನ್ಮಾನಿಸಲಾಗುವುದು.
ದಿ. ಕೃಷ್ಣರಾಜ ಹೆಗ್ಡೆಯವರ ಸ್ಮರಣಾರ್ಥ ತಾಲೂಕು ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಪ್ರಥಮ ವಿಜೇತರಿಗೆ 9,999 ರೂ. ನಗದು ಮತ್ತು ಫಲಕ ಹಾಗೂ ದ್ವಿತೀಯ 6,666 ರೂ. ಹಾಗೂ ಫಲಕ ನೀಡಲಾಗುವುದು. ಬೈಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಸರು ಗದ್ದೆಯ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟರಾದ ಪೃಥ್ವಿ ಅಂಬರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ಯೂಟ್ಯೂಬರ್ ಶರಣ್ ಚಿಲಿಂಬಿ ಆಗಮಿಸಲಿದ್ದಾರೆ ಎಂದು ಯುವ ಸಂಗಮದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಬೈಲೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



































































