ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧಾರಿತ ಕಥೆ ಮತ್ತೆ ತೆರೆಗೆ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಂದು ಕುತೂಹಲಕಾರಿ ಸಿನಿಮಾ ‘ಪೊಲೀಸ್ ಕಂಪನಿ’ ಘೋಷಿಸಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ರಿಯಲ್ ಜೀವನದ ಪಾತ್ರದಿಂದ ಈ ಕಥೆ ಪ್ರೇರಿತವಾಗಿದೆ. ದಯಾ ನಾಯಕ್ ಪಾತ್ರದಲ್ಲಿ ಪ್ರಸಿದ್ಧ ನಟ ಹರ್ಷವರ್ಧನ್ ರಾಣೆ ಅಭಿನಯಿಸಲಿದ್ದಾರೆ.

ದಯಾ ನಾಯಕ್ ಅವರು ಮುಂಬೈ ಪೊಲೀಸ್ ಇಲಾಖೆಯ ಅತ್ಯಂತ ಪ್ರಸಿದ್ಧ ಎನ್‌ಕೌಂಟರ್ ಸ್ಪೆಷಲಿಸ್ಟ್ ಮತ್ತು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾಗಿದ್ದಾರೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರಾದದ ಇವರು ಮುಂಬೈನ ಭೂಗತ ಜಗತ್ತನ್ನು ಮಟ್ಟಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ : ಪುಟವಿಟ್ಟ ಚಿನ್ನದಂತೆ ಮತ್ತೆ ಎದ್ದು ಬಂದ ದಯಾ ನಾಯಕ್‌

ಅಂಡರ್‌ವರ್ಲ್ಡ್ ಮತ್ತು ಪೋಲಿಸ್ ಕಂಪನಿ
ಸಿನಿಮಾ ಶೀರ್ಷಿಕೆಯ ಹಿನ್ನೆಲೆಯನ್ನು ವರ್ಮಾ ಸ್ಪಷ್ಟವಾಗಿ ವಿವರಿಸಿದ್ದಾರೆ. ‘ಪೊಲೀಸ್ ಎನ್ನುವುದು ಒಂದು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ. ಅಂಡರ್‌ವರ್ಲ್ಡ್ ಕಂಪನಿಯು ಹಣ ಸಂಪಾದಿಸುವ ಅಕ್ರಮ ಜಾಲವಾಗಿದೆ. ಆದರೆ ಸಂಸ್ಥೆಗೆ ಹೆಚ್ಚಿನ ಅಧಿಕಾರ ಸಿಕ್ಕಾಗ ಅದು ಕಂಪನಿಯಾಗುತ್ತದೆ. ದಾವೂದ್ ಇಬ್ರಾಹಿಂ ತನ್ನ ವಿರೋಧಿಗಳನ್ನು ಮಟ್ಟಹಾಕಿ ದುಬೈಗೆ ಓಡಿಹೋಗಿದ್ದ. ನಂತರ ಛೋಟಾ ರಾಜನ್ ಜೊತೆ ಆತನಿಗೆ ಭಿನ್ನಾಭಿಪ್ರಾಯ ಮೂಡಿತು’ ಎಂದು ಬರೆದುಕೊಂಡಿದ್ದಾರೆ ಆರ್​​ಜಿವಿ.

300 ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್
‘ದಾವೂದ್ ಮತ್ತು ರಾಜನ್ ನಡುವಿನ ವೈರತ್ವದಿಂದ ಮುಂಬೈನಲ್ಲಿ ಅಪರಾಧ ಹೆಚ್ಚಾಯಿತು. ಅಪರಾಧ ಜಗತ್ತಿನ ಕತ್ತಲಿಗೆ ಅನೇಕ ಯುವಕರು ಬಲಿಯಾಗುತ್ತಿದ್ದರು. ರೌಡಿಗಳನ್ನು ತಡೆಯಲು ಪೋಲಿಸ್ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಆ ಸಮಯದಲ್ಲಿ ಸರ್ಕಾರ ಒಂದು ವಿಶೇಷ ಪೋಲಿಸ್ ಪಡೆಯನ್ನು ರಚಿಸಿತು. ಈ ಪಡೆ 1997 ರಿಂದ 2004 ರ ನಡುವೆ ಕಾರ್ಯಾಚರಣೆ ನಡೆಸಿತು. ಕೇವಲ ಏಳು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುರುಳಿಸಿತು’ ಎಂದಿದ್ದಾರೆ ಆರ್​ಜಿವಿ.

































































error: Content is protected !!
Scroll to Top