ಪಕ್ಷಭೇದವಿಲ್ಲದೇ ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಿಕೆ – ಸುನಿಲ್ ಕುಮಾರ್
ಕಾರ್ಕಳ : ಕಾರ್ಕಳ ಕ್ಷೇತ್ರದಲ್ಲಿ ನಿವೇಶನರಹಿತರಿಗೆ ಹಂತ ಹಂತವಾಗಿ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಆ. 3ರಂದು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 94c ಹಾಗೂ 94cc ಅಡಿ ಒಟ್ಟು 34 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಅರ್ಜಿ ಸಲ್ಲಿಸಿದ ಫಲಾನುಭವಿಗಳು ಹಕ್ಕು ಪತ್ರಕ್ಕಾಗಿ ಹತ್ತಾರು ವರ್ಷ ಅಲೆದಾಡುವಂತಾಯಿತು. ನಾನು ಮಂತ್ರಿಯಾಗಿದ್ದ ಅವಧಿಯಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಹಕ್ಕುಪತ್ರ ವಿತರಣೆಗೆ ಇದ್ದ ತೊಡಕು ನಿವಾರಿಸಿ ತಾಲೂಕಿನಾದ್ಯಂತ ಸಾವಿರಕ್ಕೂ ಅಧಿಕ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲೂ ಜಾತಿ, ಧರ್ಮ, ಪಕ್ಷ ಎನ್ನುವ ಯಾವುದೇ ಭೇದಭಾವವಿಲ್ಲದೇ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವುದು ನಮ್ಮ ಗುರಿಯಾಗಿದೆ ಎಂದರು. ತಹಶೀಲ್ದಾರ್ ಪ್ರದೀಪ್ ಆರ್., ಕಂದಾಯ ನಿರೀಕ್ಷಕ ರಿಯಾಜ್ ಅಹಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಲಾನುಭವಿಗಳ ವಿವರ

ಕಾರ್ಕಳ : ರಜನಿ- ವಾಸು ದೇವಾಡಿಗ, ಜಯಶ್ರೀ- ಅಪ್ಪು ಕೋಟ್ಯಾನ್
ಸಾಣೂರು : ರಿಚರ್ಡ್ ಸಿಕ್ವೇರ – ಮಾರ್ಕ್ ಸಿಕ್ವೇರ, ಫರ್ಝಾನ ಭಾನು – ಸೈಯದ್ ನಸೀರ್
ಮಿಯ್ಯಾರು : ಕಾಂಚನ ಆರ್ ರಾವ್- ರಾಜಾರಾಮ್ ರಾವ್, ಜಾನಕಿ ಪೂಜಾರಿ – ರಾಮ
ನಿಟ್ಟೆ : ರಾಜೀವಿ ಪೂಜಾರಿ – ಸಂಜೀವ ಪೂಜಾರಿ, ಮಮತಾ ಆಚಾರ್ಯ- ವಿಶ್ವನಾಥ್ ಆಚಾರ್ಯ, ಶ್ಯಾಮಲಾ – ದಯಾನಂದ, ಗೀತಾ- ಸುರೇಂದ್ರ ಕುಲಾಲ್, ಪ್ರೇಮ ಕುಲಾಲ್- ನಾರಾಯಣ ಮೂಲ್ಯ, ರತ್ನಾವತಿ ಆಚಾರ್ಯ- ರಾಜೇಂದ್ರ ಆಚಾರ್ಯ, ಸಂಗೀತಾ- ಕೃಷ್ಣ ಆಚಾರ್ಯ, ಭೋಜಾ ಹೆಗ್ಡೆ- ಗಂಗಯ್ಯ ಹೆಗ್ಡೆ, ಸುನಂದ ಆಚಾರ್ಯ- ಮಧುಸೂದನ ಆಚಾರ್ಯ, ಮೀನಾ ನಾಯ್ಕ್ – ಗೋಪಾಲ ನಾಯ್ಕ್, ಶಾಂತಾ – ವಿಜಯ, ಉಷಾ- ಉಮೇಶ್ ನಾಯ್ಕ್, ಕೃಷ್ಣವೇಣಿ – ರಮೇಶ, ಸುಮತಿ- ಗಣೇಶ್ ಎನ್ ಸಾಲಿಯಾನ್, ಗಾಯತ್ರಿ – ರಾಘವೇಂದ್ರ ಆಚಾರ್ಯ, ಆಶಾ -ಸಂಜೀವ ಮೂಲ್ಯ, ಮಮತಾ ಪೂಜಾರಿ- ಶೋಧನ್ ಪೂಜಾರಿ, ಸುಗುಣ ಬಾಯಿ- ಸಂಜೀವ ಎನ್ ನಾಯ್ಕ್
ರೆಂಜಾಳ : ಶಾರದಾ – ಲೋಕಯ್ಯ,
ಬೋಳ : ಬೇಬಿ- ಶ್ರೀಧರ
ಮುಡಾರು : ಪ್ರೇಮ ನಾಯಕ್ – ದಿ. ಶ್ರೀನಿವಾಸ ನಾಯಕ್
ಮುಂಡ್ಕೂರು : ಐಸಮ್ಮ – ಅಬ್ದುಲ್ ರಹಿಮಾನ್
ನೂರಾಳ್ ಬೆಟ್ಟು : ದಾಮೋದರ – ಸಂಕ್ರಯ್ಯ ಆಚಾರಿ, ವಿಶಾಲ – ಅಣ್ಣು ಮೇರ, ಅರುಣ ಪೂಜಾರಿ – ಗೋವಿಂದ ಪೂಜಾರಿ, ಸಂಜೀವಿ – ಚೆಲುವಯ್ಯ ಮೂಲ್ಯ
ಶಿರ್ಲಾಲು : ಕುಂಜ್ಙರಾಮನ್ – ಅಯ್ಯಪ್ಪನ್
ಮರ್ಣೆ : ಶಕುಂತಳಾ – ಶ್ರೀಧರ ಪೂಜಾರಿ












