ಡಿಕೆಶಿ ಸಂಪುಟ ವಿಸ್ತರಣೆ – ಸಚಿವರ ಪಟ್ಟಿ ಪ್ರಕಟ

ಎಂಎಲ್‌ಸಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಮಂತ್ರಿಯಾದ ಗಾಯತ್ರಿ – ಲಕ್ಷ್ಮೀಗೆ ಒಲಿಯದ ಭಾಗ್ಯ

ಬೆಂಗಳೂರು : ಬಹುದಿನಗಳ ಕಾತರಕ್ಕೆ ಕಾರಣವಾಗಿದ್ದ ಡಿಕೆಶಿ ಸಂಪುಟ ವಿಸ್ತರಣೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. 20 ಮಂದಿ ಶಾಸಕರು ಡಿಕೆಶಿ ಸಂಪುಟ ಸೇರಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್‌ ಗಾಂಧಿ, ಸುರ್ಜೇವಾಲಾ, ಕೆಸಿ ವೇಣುಗೋಪಾಲ್‌ ಅಂತಿಮ ಸಭೆ ನಡೆಸಿ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಪಿಎಂ ನರೇಂದ್ರಸ್ವಾಮಿ – ಮಳವಳ್ಳಿ ಶಾಸಕ, ಶಿವರಾಜ ತಂಗಡಗಿ – ಕನಕಗಿರಿ ಶಾಸಕ, ರುದ್ರಪ್ಪ ಲಮಾಣಿ – ಹಾವೇರಿ ಶಾಸಕ, ಕೆ. ಎಸ್. ಬಸವಂತಪ್ಪ – ಮಾಯಕೊಂಡ ಶಾಸಕ, ಬಿ. ನಾಗೇಂದ್ರ – ಬಳ್ಳಾರಿ ಶಾಸಕ, ಟಿ. ರಘುಮೂರ್ತಿ – ಚಳ್ಳಕೆರೆ ಶಾಸಕ, ಜಮೀರ್ ಅಹಮದ್ ಖಾನ್ – ಚಾಮರಾಜಪೇಟೆ ಶಾಸಕ, ರಿಜ್ವಾನ್ ಅರ್ಷದ್‌ – ಶಿವಾಜಿನಗರ ಶಾಸಕ, ಸಂತೋಷ್ ಲಾಡ್ – ಕಲಘಟಗಿ ಶಾಸಕ, ಮಧು ಬಂಗಾರಪ್ಪ – ಸೊರಬ ಶಾಸಕ, ಪುಟ್ಟರಂಗಶೆಟ್ಟಿ – ಚಾಮರಾಜನಗರ ಶಾಸಕ, ಮಂಕಾಳ ವೈದ್ಯ – ಭಟ್ಕಳ ಶಾಸಕ, ಅಜಯ್ ಸಿಂಗ್ – ಜೇವರ್ಗಿ ಶಾಸಕ, ಚೆಲುವರಾಯಸ್ವಾಮಿ- ನಾಗಮಂಗಲ ಶಾಸಕ, ಕೆ.ಎಂ. ಶಿವಲಿಂಗೇಗೌಡ – ಅರಸೀಕೆರೆ ಶಾಸಕ, ಹೆಚ್.‌ಸಿ. ಬಾಲಕೃಷ್ಣ – ಮಾಗಡಿ ಶಾಸಕ, ಗಾಯತ್ರಿ ಶಾಂತೇಗೌಡ – MLC ಕ್ಷೇತ್ರ , ಬಸವರಾಜ ರಾಯರೆಡ್ಡಿ – ಯಲಬುರ್ಗಾ ಶಾಸಕ, ವಿಜಯಾನಂದ ಕಾಶಪ್ಪನವರ್ -ಹುನಗಂದ ಶಾಸಕ, ಲಕ್ಷ್ಮಣ ಸವದಿ -‌ ಅಥಣಿ ಶಾಸಕ ಇವರು ಡಿಕೆಶಿ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆ. 3ರ ಸಂಜೆ 4 ಗಂಟೆಗೆ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ. ನೂತನ ಸಚಿವರ ಪಟ್ಟಿಯಲ್ಲಿ ಉಡುಪಿ ಉಸ್ತುವಾರಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಹೆಸರಿಲ್ಲ.

ಜಿ.ಎಸ್.‌ ಪಾಟೀಲ್‌ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ, ಎ.ಎಸ್.‌ ಪೊನ್ನಣ್ಣ ಉಪಸಭಾಧ್ಯಕ್ಷ ಸ್ಥಾನಕ್ಕೆ, ಸಲೀಂ ಅಹಮ್ಮದ್‌ ಅವರನ್ನು ಸಭಾಪತಿಯನ್ನಾಗಿ, ಉಮಾಶ್ರೀ ಅವರನ್ನು ಉಪಸಭಾಯನ್ನಾಗಿ ಆಯ್ಕೆ ಮಾಡಲಾಗಿದೆ.

























error: Content is protected !!
Scroll to Top