ಇತ್ತೀಚಿನ ದಿನಗಳಲ್ಲಿ 25-40ರ ವಯಸ್ಸಿನ ಜನತೆ ಹೃದಾಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಯಾಕೆ ಹೀಗಾಗುತ್ತಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ.
ಪ್ರಮುಖ ಕಾರಣಗಳು
ಹೃದಯ ಸಂಬಂಧಿ ಸಮಸ್ಯೆಗಳು, ಒತ್ತಡ, ಆತಂಕ, ಜಾಸ್ತಿ ಕೆಲಸ, ಸಾಲ. ಇದರಿಂದ ಹೃದಯದ ಮೇಲೆ ಲೋಡ್ ಬೀಳುತ್ತೆ.
ರಾತ್ರಿ 1-2ರವರೆಗೆ ಮೊಬೈಲ್ ಬಳಸುವುದು, ಕೆಲಸ ಮಾಡುವುದು. ನಿದ್ರೆ ಸರಿಯಾಗಿ ಮಾಡದಿದ್ದರೆ ಹೃದಯಕ್ಕೆ ರೆಸ್ಟ್ ಸಿಗುವುದಿಲ್ಲ.
ಜಂಕ್ ಫುಡ್, ಎನರ್ಜಿ ಡ್ರಿಂಕ್ಸ್, ಹೆಚ್ಚು ಎಣ್ಣೆ, ಸಕ್ಕರೆ, ಕೆಫೀನ್. ಕೊಲೆಸ್ಟ್ರಾಲ್ ಬೇಗ ಜಾಸ್ತಿ ಆಗುತ್ತೆ.
ವ್ಯಾಯಾಮ ಇಲ್ಲದ ಜೇವನ. ರಕ್ತ ಸಂಚಾರದಲ್ಲಿ ಅಡಚಣೆ.
ಸಿಗರೇಟ್ ಮತ್ತು ಮದ್ಯಪಾನ ಯುವಕರಲ್ಲಿ ಜಾಸ್ತಿ ಆಗ್ತಿದೆ.
ಕೋಪ, ಭಯ, ದುಃಖದಿಂದ ಹೃದಯದ “ಓಜಸ್” ಕಡಿಮೆ ಆಗುತ್ತೆ. ಇದರಿಂದ ಬಿಪಿ, ಸಕ್ಕರೆ ಕಾಯಿಲೆ ಲೈಫ್ ಸ್ಟೈಲ್ ಕಾಯಿಲೆಗಳು ಬೇಗ ಬರುತ್ತಿದೆ.
ಪ್ಲಾಸ್ಟಿಕ್, ಪೆಸ್ಟಿಸೈಡ್, ರಾತ್ರಿ ಜಾಗರಣೆ, ಒತ್ತಡದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಅತಿಯಾದ ಮಾತ್ರೆ ಬಳಕೆ ಹಾಗೂ ಮದ್ಯ ಸೇವನೆಯಿಂದ ಯಕೃತ ಹಾಗೂ ಮೂತ್ರಪಿಂಡ ಕಾಯಿಲೆಗಳು ಜಾಸ್ತಿ ಆಗುತ್ತಿದೆ.
ಮಾನಸಿಕ ಆರೋಗ್ಯ ಬಹು ಮುಖ್ಯ ಪಾತ್ರ ವಹಿಸುತ್ತದೆ. ಡಿಪ್ರೆಷನ್, ಒಂಟಿತನ, ಮಾನಸಿಕ ಒತ್ತಡ ಜಾಸ್ತಿ ಆಗುತ್ತಿದೆ.
ಆಕ್ಸಿಡೆಂಟ್‌ಗಳು, ವೇಗವಾಗಿ ಬೈಕ್/ಕಾರ್ ಓಡಿಸುವುದು.
ಪೌಷ್ಟಿಕಾಂಶದ ಕೊರತೆ. ಪ್ರೋಟೀನ್, ವಿಟಮಿನ್ ಡಿ, ಬಿ 12 ಕೊರತೆ.
ಆಯುಷ್ಯ ಹೆಚ್ಚಿಸಲು ಹೀಗೆ ಮಾಡಿ
ಕಾರಣಗಳನ್ನು ದೂರ ಮಾಡಿ.
ಋತುಚರ್ಯೆ ಮತ್ತು ದಿನಚರ್ಯ ಪಾಲಿಸಿ.
ಬೆಳಗ್ಗೆ 5-6ಕ್ಕೆ ಎದ್ದೇಳಿ. ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ದೇಹಕ್ಕೆ ಶಕ್ತಿ ಜಾಸ್ತಿ.
ಅಭ್ಯಂಗ ಸ್ನಾನ. ದಿನಕ್ಕೆ 10 ನಿಮಿಷ ತೆಂಗಿನ ಎಣ್ಣೆ/ಎಳ್ಳೆಣ್ಣೆ ಮಸಾಜ್ ಮಾಡಿ. ಇದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
ಬೇಗ ಮಲಗಿ, ಬೇಗ ಎದ್ದೇಳಿ : ರಾತ್ರಿ 10ರ ಒಳಗೆ ಮಲಗಿದರೆ ದೇಹವು ಚುರುಕಾಗಿರುತ್ತದೆ.

ಆಹಾರ ಹೀಗಿರಲಿ
ಹಿತವಾದ, ಸಮಯಕ್ಕೆ, ಅರ್ಧ ಹೊಟ್ಟೆ ಊಟ ಮಾಡಿ.
ಬಿಸಿ ಆಹಾರ, ತಾಜಾ ತರಕಾರಿ, ತುಪ್ಪ, ಬೆಳ್ಳುಳ್ಳಿ, ಅರಿಶಿನ ಬಳಸಿ.
ರಾತ್ರಿ 7ರ ಒಳಗೆ ರಾತ್ರಿ ಊಟ ಮುಗಿಸಿ. ಅರಿಶಿನ ಹಾಲು ಕುಡಿಯಿರಿ.
ಪ್ಯಾಕೆಟ್ ಫುಡ್, ಕೋಲ್ಡ್ ಡ್ರಿಂಕ್ಸ್, ಅತಿಯಾದ ಕಾಫಿ ಚಹಃ ಕಡಿಮೆ ಮಾಡಿ.
ಮನಸ್ಸಿನ ಆರೋಗ್ಯ ಪ್ರಾಮುಖ್ಯತೆ ನೀಡಿ.
ದಿನಕ್ಕೆ 10 ನಿಮಿಷ ಧ್ಯಾನ/ಪ್ರಾರ್ಥನೆ ಮಾಡಿ.
ಕೋಪ, ದ್ವೇಷ, ಆತಂಕವನ್ನು ಕಡಿಮೆ ಮಾಡಿ.
ಪ್ರಕೃತಿಯೊಂದಿಗೆ ಸಮಯ ಕಳೆಯಿರಿ.
ರಸಾಯನ
ಇದು ವಯಸ್ಸಾಗುವುದನ್ನು ತಡೆಯುವ ಆಯುರ್ವೇದ ಚಿಕಿತ್ಸೆ.
ಚ್ಯವನಪ್ರಾಶ ಲೇಹ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಅಶ್ವಗಂಧ ಮತ್ತು ಶತಾವರಿ ಒತ್ತಡ ಕಡಿಮೆ ಮಾಡಿ ಶಕ್ತಿ ಕೊಡುತ್ತದೆ.
ತ್ರಿಫಲಜೀರ್ಣಕ್ರಿಯೆ ಸರಿ ಮಾಡಿ ವಿಷ ಹೊರಹಾಕುತ್ತದೆ.
ಬ್ರಾಹ್ಮಿ ಮೆದುಳು ಮತ್ತು ನೆನಪಿನ ಶಕ್ತಿಗೆ ಒಳ್ಳೇದು.
ಪಂಚಕರ್ಮ
ವರ್ಷಕ್ಕೆ ಒಮ್ಮೆ ದೇಹದಲ್ಲಿನ ಟಾಕ್ಸಿನ್ ತೆಗೆಯಲು ವಮನ, ವಿರೇಚನ ಮಾಡಿಸಿಕೊಳ್ಳಬಹುದು. ವೈದ್ಯರ ಸಲಹೆಯೊಂದಿಗೆ ಮಾಡಿ.
ಚೆಕ್-ಅಪ್ ಮಾಡಿಸಿ
30 ದಾಟಿದ ಮೇಲೆ ವರ್ಷಕ್ಕೆ 1 ಬಾರಿ ಬಿಪಿ, ಶುಗರ್, ಇಸಿಜಿ, ವಿಟಮಿನ್ ಚೆಕ್ ಮಾಡಿಸಿ.
ಆಯುಷ್ಯ ಜಾಸ್ತಿ ಮಾಡೋಕೆ ದುಬಾರಿ ಔಷಧ ಬೇಕಿಲ್ಲ. ಸರಿಯಾದ ನಿದ್ರೆ, ಒಳ್ಳೆ ಊಟ, ನೆಮ್ಮದಿ ಇದೆ ದೊಡ್ಡ ಔಷಧ.




















