ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್‌ ನೇಮಕ

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (KPCC) ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್‌ ಅವರನ್ನ ನೇಮಕ ಮಾಡಿ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಅಧಿಕಾರ ಸ್ವೀಕರಿದ ಬೆನ್ನಲ್ಲೇ ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗಾಗಿ ತೆರವಾದ ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್ ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮೇಲ್ಮನೆ ಟಿಕೆಟ್‌
ಇದಕ್ಕೂ ಮುನ್ನವೇ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿತ್ತು. ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ, ತಿಪ್ಪಣ್ಣ ಕಮಕನೂರು, ಮಳವಳ್ಳಿ ಶಿವಣ್ಣಗೆ ಅವರಿಗೆ ಹೈಕಮಾಂಡ್‌ ಟಿಕೆಟ್‌ ಘೋಷಣೆ ಮಾಡಿದೆ.

ಬಿ. ಕೆ. ಹರಿಪ್ರಸಾದ್‌ ರಾಜಕೀಯ ಸ್ಥಾನಮಾನಗಳು

  • ರಾಜ್ಯಸಭೆ ಸದಸ್ಯರಾಗಿ ಆಯ್ಕೆ- 1990, 2004, 2013 ಮತ್ತು 2014
  • ವಿಧಾನ ಪರಿಷತ್‌ ಸದಸ್ಯ- 30 ಜೂನ್‌ 2020ರಿಂದ
  • ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ- 27 ಜನವರಿ 2022ರಿಂದ 2023ರ ಮೇವರೆಗೆ
  • 1981-82 ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ
    *1990-96 ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿಗಳ ಸಲಹಾ ಸಮಿತಿಯ ಸದಸ್ಯ
    *1995-96 ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿ ಹಾಗೂ ಕಾರ್ಮಿಕ ಕಲ್ಯಾಣ ಸಮಿತಿಯ ಸದಸ್ಯ
    *2004-2009 ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಮಿತಿಯ ಸದಸ್ಯ
    *2004-2010 ನಗರಾಭಿವೃದ್ಧಿ ಸಮಿತಿ ಸದಸ್ಯ
  • 2004-2010- ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ
    *2006-2010 ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಲಹಾ ಸಮಿತಿ ಅಧ್ಯಕ್ಷ
  • 2007-2010 ಭಾರತ-ಟರ್ಕಿ ಸಂಸದೀಯ ಸ್ನೇಹ ಕೂಟದ ಸದಸ್ಯ
  • 2007-2009 ಭಾರತ-ಪೋಲೆಂಡ್ ಸಂಸದೀಯ ಸ್ನೇಹ ಕೂಟದ ಸದಸ್ಯ
  • 2008-2010 ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ
  • 2008-2009 ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ
  • 2008-2010 ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ
  • 2009-2010 ಕಾಫಿ ಮಂಡಳಿ ಸದಸ್ಯ
  • 2013 ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲ ಸಮಿತಿಯ ಸದಸ್ಯ
  • 2013-2014 ಮಾಹಿತಿ ತಂತ್ರಜ್ಞಾನ ಸಮಿತಿ ಸದಸ್ಯ
  • 2014 ರಾಷ್ಟ್ರೀಯ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಂಡಳಿ ಸದಸ್ಯ
  • 2014 ವಿಮಾ ಕಾನೂನು (ತಿದ್ದುಪಡಿ) ಮಸೂದೆಯ ರಾಜ್ಯಸಭೆಯ ಸಲಹಾ ಸಮಿತಿಯ ಸದಸ್ಯ
  • 2014-2017 ಹಿಂದುಳಿದ ವರ್ಗಗಳ ಸಮಿತಿಯ ಸದಸ್ಯ
  • 2017 ಕಲ್ಲಿದ್ದಲು ಮತ್ತು ಉಕ್ಕು ಸಮಿತಿಯ ಸದಸ್ಯ
  • 2018 ರಾಸಾಯನಿಕ ಮತ್ತು ರಸಗೊಬ್ಬರ ಸಮಿತಿ ಸದಸ್ಯ, ಆಹಾರ ನಿರ್ವಹಣೆ ಜಂಟಿ ಸಮಿತಿಯ ಸದಸ್ಯ

ರಾಜಕೀಯ ಹಿನ್ನೆಲೆ

  • 1972ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸದಸ್ಯತ್ವ ಸ್ವೀಕಾರ.
  • ಅಖಿಲ ಭಾರತ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ- 1979-81
  • ಅಖಿಲ ಭಾರತ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ- 1989-1990
  • ಕರ್ನಾಟಕ ರಾಜ್ಯ ಸಂಸದರ ವೇದಿಕೆ ಸಂಯೋಜಕರು- 1994- 1996
  • ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಜಂಟಿ ಕಾರ್ಯದರ್ಶಿ- 1997-1998
  • ಅಖಿಲ ಭಾರತ ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷರು- 2000-2001
  • ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ- 2001-2006
  • ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ- 2006-2018
  • ಹಾಲಿ ಹರಿಯಾಣ ರಾಜ್ಯ ಕಾಂಗ್ರೆಸ್ ಎಐಸಿಸಿ ಉಸ್ತುವಾರಿ

ವಿವಿಧೆಡೆ ಎಐಸಿಸಿ ಉಸ್ತುವಾರಿ
ಗುಜರಾತ್‌, ಪುದುಚ್ಚೇರಿ, ದಿಯೂ ಮತ್ತು ದಮನ್‌, ಗೋವಾ, ದಾದರ್‌ ನಗರ್‌ ಹವೇಲಿ, ಹರ್ಯಾಣ, ಮಧ್ಯಪ್ರದೇಶ, ಚತ್ತೀಸ್‌ಗಢ, ಜಾರ್ಖಂಡ್‌, ಒಡಿಶಾ, ಬಿಹಾರ, ರಾಜಸ್ಥಾನ, ಪಂಜಾಬ್‌, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ ಮತ್ತು ಉತ್ತರ ಪ್ರದೇಶ

ರಾಜ್ಯಮಟ್ಟದ ಹುದ್ದೆಗಳು

  • ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್‌ ಸದಸ್ಯ- 1973-1977 ಮತ್ತು 1977-1978
  • ಎಂಇಇಎಸ್‌ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ- 1972-1973
  • ಎಸ್‌ಜೆಆರ್‌ಸಿ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ-1977-1978
  • ಪ್ರಧಾನ ಕಾರ್ಯದರ್ಶಿ- ಹೈಗ್ರೌಂಡ್‌ ಬ್ಲಾಕ್‌ ಯುವ ಕಾಂಗ್ರೆಸ್‌ ಸಮಿತಿ- 1973-1976
  • ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ- 1981-1982
  • ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ- 1980-1982
  • ಇಂಡಿಯನ್‌ ಯಂಗ್‌ ವರ್ಕರ್ಸ್‌ ಕೌನ್ಸಿಲ್‌ ಅಧ್ಯಕ್ಷ- 1981-1982
















































error: Content is protected !!
Scroll to Top