ಕಾರ್ಕಳ : ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಕರ್ನಾಟಕ ದಕ್ಷಿಣದ ವಿಶ್ವ ಹಿಂದೂ ಪರಿಷತ್‌ನ ಗೋ ರಕ್ಷಾ ಪ್ರಮುಖ್ ಹಾಗೂ ಶನಿಪೂಜಾ ಸಮಿತಿಯ ಸ್ಥಾಪಕಾಧ್ಯಕ್ಷ ಸುನಿಲ್ ಕೆ. ಆರ್. ಅವರ 50ನೇ ಹುಟ್ಟು ಹಬ್ಬ ಸಂಭ್ರಮದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬವೊಂದಕ್ಕೆ ದಾನಿಗಳ ಸಹಕಾರದಿಂದ ನಿರ್ಮಿಸಿಕೊಡಲಿರುವ ಮನೆ ಭೂಮಿಪೂಜೆ ಜೂ. 3ರಂದು ನಡೆಯಿತು.
ಈ ಸಂದರ್ಭ ಜಗದೀಶ್ ಮಲ್ಯ, ಕಾರ್ಕಳ ಟೈಗರ್ಸ್‌ನ ಪ್ರಶಾಂತ್ ಕಾಮತ್, ಹರೀಶ್ ಅಮೀನ್, ವಿಶ್ವ ಹಿಂದೂ ಪರಿಷತ್‌ನ ವೀರ ಮಾರುತಿ ಶಾಖೆಯ ಕಾರ್ಯಕರ್ತರು, ಸಾರ್ವಜಿಕ ಶನಿಪೂಜಾ ಸಮಿತಿಯ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಸುನಿಲ್ ಕೆ. ಆರ್. 50ನೇ ಹುಟ್ಟು ಹಬ್ಬ – ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಮನೆ ನಿರ್ಮಾಣ
























