ಕುಕ್ಕುಜೆ ಶಾಲೆಯಲ್ಲಿ ಕಸಕ್ಕೆ ಬೆಂಕಿ ಹಚ್ಚುವಾಗ ಸ್ಫೋಟ – ‌ ನಾಲ್ಕು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ : ಕುಕ್ಕುಜೆ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ಕಸಕ್ಕೆ ಬೆಂಕಿ ಹಚ್ಚುವಾಗ ಸ್ಫೋಟಗೊಂಡು ನಾಲ್ಕು ಮಂದಿ ವಿದ್ಯಾರ್ಥಿಗಳು ಗಾಯಗೊಂಡ ದುರ್ಘಟನೆ ಜೂನ್ 3ರಂದು ನಡೆದಿದೆ.

ಶಾಲಾ ದೈಹಿಕ ಶಿಕ್ಷಕರು ಹೇಳಿದಂತೆ ವಿದ್ಯಾರ್ಥಿಗಳಾದ ಸಂಸ್ಕೃತ್ (12), ಗಗನ್ (12), ಹೃತ್ವಿಕ್(12) ಹಾಗೂ ಶಾಲಾ ಶಿಕ್ಷಕಿ ಅರುಣಾಕ್ಷಿ ಅವರ ಸಂಬಂದಿ ಅದ್ವಿನ್(11) ಕಂಪ್ಯೂಟರ್ ಕ್ಲಾಸ್ ಕ್ಲಿನಿಂಗ್ ಮಾಡಿ ಕಸವನ್ನು ಶಾಲಾ ಕಾಂಪೌಂಡನ ಒಂದೆಡೆ ಸುಟ್ಟಾಗ ಕಸದಲ್ಲಿದ್ದ ಯಾವುದೋ ಒಂದು ಡಬ್ಬದಂತಹ ವಸ್ತು ಸ್ಫೋಟಗೊಂಡು ಈ ನಾಲ್ಕೂ ಮಕ್ಕಳಿಗೆ ಸುಟ್ಟ ಗಾಯಗಳಾಗಿರುತ್ತವೆ. ಶಿಕ್ಷಕರು ಸೂಕ್ತ ಮುಂಜಾಗ್ರತೆ ವಹಿಸದೇ ನಿರ್ಲಕ್ಷತನದಿಂದ ವಿದ್ಯಾರ್ಥಿಗಳಲ್ಲಿ ಕಸಕ್ಕೆ ಬೆಂಕಿ ಹಾಕಲು ಹೇಳಿರುವುದು ಕೃತ್ಯಕ್ಕೆ ಕಾರಣವಾಗಿದೆ ಎಂದು ಸಂಸ್ಕೃತ್‌ ತಂದೆ ನಿತ್ಯಾನಂದ ನಾಯಕ್‌ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.































































error: Content is protected !!
Scroll to Top