ಕಾರ್ಕಳ ಜ್ಞಾನಸುಧಾ – ಶ್ರೀ ಮಹಾಗಣಪತಿ ಪ್ರತಿಷ್ಠಾ ಮಹೋತ್ಸವ

ಕಾರ್ಕಳ : ಶಿಕ್ಷಣ ಕ್ಷೇತ್ರದಲ್ಲಿ ಡಾ.ಸುಧಾಕರ್ ಶೆಟ್ಟಿಯವರು ನಿಜವಾದ ಶರಣ. ಅವರಿಗಿರುವ ಶೈಕ್ಷಣಿಕ ಕಾಳಜಿ, ಬದ್ಧತೆಯನ್ನು ಸರ್ವರೂ ಮೆಚ್ಚಲೇ ಬೇಕು. ಮಾತ-ಪಿತರನ್ನು ಗೌರವಿಸಿದವರು ಜೀವನದಲ್ಲಿ ಸದಾ ಸಫಲತೆಯನ್ನು ಪಡೆಯುತ್ತಾರೆ ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಅಜಿತ್ ಸಿ. ಮಣ್ಣಿಕೇರಿ ಹೇಳಿದರು.
ಅವರು ಕುಕ್ಕುಂದೂರಿನ ಗಣಿತನಗರದ ಶ್ರೀ ಮಹಾಗಣಪತಿ ದೇವಳದ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯಅತಿಥಿಯಾಗಿದ್ದ ಸಾಯಿರಾಧಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಮನೋಹರ್‌ ಎಸ್. ಶೆಟ್ಟಿ ಮಾತನಾಡಿ, ನಾವೆಷ್ಟೇ ಶಿಕ್ಷಣ ಪಡೆದು ಪದವೀದರರಾದರೂ, ವ್ಯಕ್ತಿತ್ವದ ಗುಣಮಟ್ಟ ಎನ್ನುವುದು ನಮ್ಮ ಸಂಸ್ಕಾರದಿಂದ ಕೂಡಿರಲು ಸಾಧ್ಯ. ಅಂತಹ ಸಂಸ್ಕಾರಯುತವಾದ ಶಿಕ್ಷಣ ಜ್ಞಾನಸುಧಾದಿಂದ ಲಭಿಸುತ್ತಿದೆ ಎಂಬುದಕ್ಕೆ ಇಂದಿನ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳ ನಡವಳಿಕೆಯೆ ಸಾಕ್ಷಿ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವೆಂಕಟರಮಣದೇವ್‌ ಎಜ್ಯುಕೇಶನಲ್ & ಕಲ್ಚರಲ್‌ ಟ್ರಸ್ಟ್ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೊತೆಗೆ ಅವರ ಏಳಿಗೆಗೆ ಬೆನ್ನೆಲುಬಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿ ವರ್ಗವನ್ನು ಪ್ರೋತ್ಸಾಹಿಸುತ್ತಿರುವ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್ ಟ್ರಸ್ಟಿನ ಕಾರ್ಯ ಶ್ಲಾಘನೀಯ ಎಂದು ನುಡಿದರು.

ಪ್ರತಿಭಾ ಪುರಸ್ಕಾರ – 60,09,887 ರೂ. ಪ್ರೋತ್ಸಾಹಧನ ವಿತರಣೆ
ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ವತಿಯಿಂದ ಸೇವಾ ನಿವೃತ್ತರಾದ ಗೋಪಾಲ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ 10 ವರ್ಷಗಳ ಸೇವೆ ಸಲ್ಲಿಸಿದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಸಾಧಕರನ್ನು ಜೊತೆಗೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕ ವರ್ಗವನ್ನು ಗೌರವಿಸಲಾಯಿತು. ಟ್ರಸ್ಟಿನಿಂದ ಈ ಬಾರಿ 60,09,887 ರೂ. ಮೊತ್ತದ ಪ್ರೋತ್ಸಾಹಧನ ವಿತರಿಸಲಾಯಿತು. ಇದೇ ಸಂದರ್ಭ 41ನೇ ಸಂಚಿಕೆ–ಜ್ಞಾನಸುಧಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಟ್ರಸ್ಟಿಗಳಾಧ ಸಿ.ಎ. ನಿತ್ಯಾನಂದ ಪ್ರಭು, ಅನಿಲ್ ಕುಮಾರ್‌ ಜೈನ್ ಹಾಗೂ ವಿದ್ಯಾವತಿ ಎಸ್ ಶೆಟ್ಟಿ, ಉಜ್ವಲ ಡೆವಲರ್ಸ್‌ನ ಪುರುಷೋತ್ತಮ ಶೆಟ್ಟಿ, ಗಣಿತನಗರದ ಶ್ರೀ ಮಹಾಗಣಪತಿ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಕಮಲಾಕ್ಷ ನಾಯಕ್, ಕಾರ್ಕಳ ಜ್ಞಾನಸುಧಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ದೇವಸ್ಥಾನದ ಕಾರ್ಯದರ್ಶಿ ಹಾಗೂ ಉಪಪ್ರಾಂಶುಪಾಲ ಸಾಹಿತ್ಯ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು. ಉಪನ್ಯಾಸಕರಾದ ಶರತ್‌ ಆರ್. ಸಾಧಕ ವಿದ್ಯಾರ್ಥಿಗಳ ಪಟ್ಟಿ ಹಾಗೂ ಸಂತೋಷ್ ನೆಲ್ಲಿಕಾರು ಸನ್ಮಾನಿತರ ಪತ್ರ ವಾಚಿಸಿದರು.

































































































































































error: Content is protected !!
Scroll to Top