ಮಂಗಳೂರು : ನವಮಂಗಳೂರು ಬಂದರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಕಾರ್ಗೋ ಹಡಗು ಆಗಮಿಸಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ.
ಮಾ.14 ರಂದು ಅಮೇರಿಕದಿಂದ ಪಿಕ್ಸಿಸ್ ಪಯಿನೀರ್ ಕಾರ್ಗೋ ಹಡಗು ಹೊರಟಿತ್ತು. ಇಂದು ನವಮಂಗಳೂರು ಬಂದರಿಗೆ ಆಗಮಿಸಿದೆ. ಏಜೀಸ್ ಕಂಪನಿಗೆ ಎಲ್‍ಪಿಜಿಯನ್ನು ಈ ಹಡಗು ತಂದಿದೆ. ಇದರಿಂದಾಗಿ ರಾಜ್ಯದಲ್ಲಿ ತಲೆದೂರಿರುವ ಸಿಲಿಂಡರ್ ಅಭಾವ ಪರಿಹಾರ ಆಗುವ ನಿರೀಕ್ಷೆಯಿದೆ.














































































