ಶಿಕ್ಷಣದಿಂದ ಸಮಾಜ ಸದೃಢ – ಸುಕುಮಾರ್ ನಾಯ್ಕ್

ಕಾರ್ಕಳ : ಶಿಕ್ಷಣದಿಂದ ಸಮಾಜ ಸದೃಢವಾಗುತ್ತದೆ. ಆದ್ದರಿಂದ ನಮ್ಮ ಸಮುದಾಯದ ಪ್ರತಿ ಮಗುವು ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು ಎಂದು ಎನ್.ಎಂ.ಪಿ.ಟಿ. ಪಣಂಬೂರು ಮಂಗಳೂರಿನ ಸುಕುಮಾರ್ ನಾಯ್ಕ್ ಹೇಳಿದರು.
ಅವರು ದುರ್ಗಾ ಗ್ರಾಮದ ಅರ್ಬಿಯ ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ವರ್ಷಾವಧಿ ನೇಮೋತ್ಸವದ ಅಂಗವಾಗಿ ಬ್ರಹ್ಮಶ್ರೀ ಮೊಗೇರ ಮಹಿಳಾ ಮಂಡಳಿಯ ವತಿಯಿಂದ ನಡೆದ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಲಕ್ಷ್ಮಿ ಸುಬ್ರಾಯ ಕಾರ್ಯಕ್ರಮ ಪಾಠಕ್ ಉದ್ಘಾಟಿಸಿದರು. ದೈವಸ್ಥಾನದ ಆಡಳಿತ ಮೊಕ್ತೇಸರ ಅರ್ಬಿ ಸುಬ್ರಾಯ ಪಾಠಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಇಂಡಸ್ಟ್ರಿಯಲ್ ಏರಿಯಾದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಭಟ್, ಉದ್ಯಮಿ ರಾಮಚಂದ್ರ ನಾಯ್ಕ್, ಲಲಿತಾ ರಾಮಚಂದ್ರ ನಾಯ್ಕ್, ದುರ್ಗ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಹೇಶ್ ರಾವ್, ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ಸಮಿತಿಯ ಅಧ್ಯಕ್ಷ ರಮೇಶ್ ಅಂಬಡೆಮಾರು, ಗುರಿಕಾರರಾದ ಸಂಜೀವ ಕಾಡಂಬಳ, ಸಾಧು ಅಂಬಡೆಮಾರು, ದಿನೇಶ್ ಕಾಡಂಬಳ, ಮಾಣಿಗ ಕುರ್ಕಲಪಲ್ಕೆ ಮತ್ತಿತರರು ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಜಯ ಕಾಡಂಬಳ ಸ್ವಾಗತಿಸಿ, ಪ್ರತಿಮಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. ಕೃತಿ ವಂದಿಸಿದರು.



































































































error: Content is protected !!
Scroll to Top