ಕಾರ್ಕಳ : ಜನನಿ ಸಂಜೀವಿನಿ ಒಕ್ಕೂಟ ಮರ್ಣೆ ವತಿಯಿಂದ ಮಾ. 16ರಂದು ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಮಾತನಾಡಿ, ಮಹಿಳೆಯರು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದು. ಜನನಿ ಸಂಜೀವಿನಿ ಒಕ್ಕೂಟವು ಮಹಿಳಾಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ವಿಚಾರ ಎಂದರು.
ಕೆನರಾ ಬ್ಯಾಂಕ್‌ನ ಪ್ರದೀಪ ಕೆ., ಒಕ್ಕೂಟದ ಅಧ್ಯಕ್ಷ ಸುಮಿತ್ರ ಭಂಡಾರಿ, ಕಾರ್ಯದರ್ಶಿ ಇಂದಿರಾ ಶೆಟ್ಟಿ, ಉಪಾಧ್ಯಕ್ಷ ಮರಿಯಮ್ಮ ಉಪಸ್ಥಿತರಿದ್ದರು.
ಸನ್ಮಾನ
ಉತ್ತಮ ಅಂಗನವಾಡಿ ಸಹಾಯಕಿ ಎಂದು ಪ್ರಶಸ್ತಿ ಪಡೆದ ಸಂಜೀವಿನಿ ಸದಸ್ಯೆ ಲತಾ ಹಾಗೂ ನಾಟಿವೈದ್ಯ ಸಂಕ್ರಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಎಲ್ ಸಿ ಆರ್ ಪಿ, ಪಶುಸಖಿ, ಕೃಷಿ ಸಖಿ, ಎಫ್ ಎಲ್ ಸಿ ಆರ್ ಪಿ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಎಂ. ಬಿ. ಕೆ. ಜಲಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.





















