ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸರಿಗೆ ಸನ್ಮಾನ

ಕಾರ್ಕಳ : ಮಹಿಳಾ ದಿನಾಚರಣೆ ಅಂಗವಾಗಿ ಜೆಸಿಐ ಕಾರ್ಕಳ ರೂರಲ್ ನ ಲೇಡಿ ಜೆಸಿ ವಿಭಾಗ ವತಿಯಿಂದ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಮಹಿಳಾ ಪೊಲೀಸರನ್ನು ಸನ್ಮಾನಿಸಲಾಯಿತು. ಸಂಪಾ ಶೆಟ್ಟಿ. ಶೋಭಾ, ಸುಜಯಾ, ಶಶಿಕಲಾ, ಗೀತಾ, ಸುಮಿತ್ರಾ, ಅರ್ಚನಾ, ಲಕ್ಷ್ಮೀ, ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ನಗರ ಠಾಣೆ ಪಿಎಸ್ಐ ಮುರಳೀಧರ್ ನಾಯ್ಕ್, ಮಹಿಳಾ ದಿನಾಚರಣೆ ಸಂದರ್ಭ ಮಹಿಳಾ ಪೊಲೀಸರನ್ನು ಜೇಸಿಐ ಸಂಸ್ಥೆ ಗೌರವಿಸುತ್ತಿರುವುದು ಅರ್ಥಪೂರ್ಣ ಕಾರ್ಯವೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಪಾ ಶೆಟ್ಟಿ, ಜೆಸಿಐ ಸಂಸ್ಥೆಯ ವತಿಯಿಂದ ನಡೆಯುತ್ತಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡುತ್ತಿದ್ದೆವು. ಆದರೆ, ಇಂದು ಜೇಸಿಐ ಸಂಸ್ಥೆ ಪೊಲೀಸ್‌ ಕಾರ್ಯದಲ್ಲಿರುವ ನಮ್ಮನ್ನು ಗುರುತಿಸಿ ಗೌರವಿಸಿರುವುದು ನಮ್ಮಲ್ಲಿ ಹೆಮ್ಮೆ ಮೂಡಿಸಿದೆ ಎಂದರು.
ಜೇಸಿಐ ರೂರಲ್‌ ಅಧ್ಯಕ್ಷ ಸೃಜನ್ ಪೂಜಾರಿ ಮಾತನಾಡಿ, ನಾನು ಅಧಿಕಾರ ಸ್ವೀಕರಿಸಿ ಮೊದಲ ಕಾರ್ಯಕ್ರಮವಾಗಿ ಪೊಲೀಸರಿಗೆ ಸನ್ಮಾನ ಸ್ಮರಣೀಯವಾಗಿರಲಿದೆ ಎಂದರು.
ಜೇಸಿಐ ವಲಯ ಉಪಾಧ್ಯಕ್ಷ ಅರುಣ್ ಪೂಜಾರಿ ಮಾಂಜ, ಸಂಸ್ಥಾಪಕರಾದ ಸತೀಶ್ ಪೂಜಾರಿ, ಪೂರ್ವಾಧ್ಯಕ್ಷರಾದ ಪೂರ್ವಾಧ್ಯಕ್ಷರಾದ ಶೋಭಾ ಭಾಸ್ಕರ್, ವೀಣಾ ರಾಜೇಶ್, ಸಂತೋಷ್ ಪೂಜಾರಿ, ಶ್ವೇತಾ ಅರುಣ್, ವಿಜಯ ಸತೀಶ್, ಹರಿಣಿ ಬಂಗೇರ, ಸುಧೀರ್ ಪೂಜಾರಿ, ಸಾಹಿತ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಮಮತಾ ಸಂತೋಷ್‌ ಸ್ವಾಗತಿಸಿದರು. ಮೋಹನ್ ನಕ್ರೆ ವಂದಿಸಿದರು.



































































































error: Content is protected !!
Scroll to Top