ವರಂಗ ಕೆಲ್‌ಟೆಕ್‌, ಸ್ವರಾಜ್‌ ಮೈದಾನದಲ್ಲಿ ಬೆಂಕಿ ಆಕಸ್ಮಿಕ

ಕಾರ್ಕಳ : ವರಂಗ ಕೆಲ್‌ಟೆಕ್‌ ಎನರ್ಜಿ ಲಿಮಿಟೆಡ್‌ನ ಎಕ್ಸ್‌ಪ್ಲೋಸಿವ್‌ ಸ್ಟೋರೇಜ್‌ ಸೇಫ್ಟಿ ಸಮೀಪ ಮಂಗಳವಾರ ಬೆಳಿಗ್ಗೆ 6:30ಕ್ಕೆ ಬೆಂಕಿ ಆವರಿಸಿದೆ. ಕೆಲ್‌ಟೆಕ್‌ಗೆ ಸೇರಿರುವ 600 ಎಕರೆ ವಿಸ್ತಾರವಾಗಿರುವ ಕಾಡಿನ ಒಂದು ಬದಿ ಬೆಂಕಿ ತಗುಲಿ ಬೆಂಕಿಯ ಕೆನ್ನಾಲಿಗೆಗೆ ಬಿದಿರು ನಾಶವಾಗಿದೆ.
ಮಾಹಿತಿ ತಿಳಿದು ಕಾರ್ಕಳದಿಂದ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿರುತ್ತಾರೆ. ಕಾರ್ಕಳ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್‌, ಹರಿಪ್ರಸಾದ್‌ ಶೆಟ್ಟಿ, ಚಾಲಕ ಲೋಕೇಶ್, ನಿತ್ಯಾನಂದ, ಬಸವರಾಜ್‌ ಮೊದಲಾದವರು ಕಾರ್ಯಾಚರಣೆಯಲ್ಲಿದ್ದರು.

ಕಾರ್ಕಳ ಸ್ವರಾಜ್‌ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹಚ್ಚಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್‌, ರೂಪೇಶ್‌, ಚಾಲಕ ಮುಜಾಮಿಕ್‌, ಗಣೇಶ್‌, ದಿನೇಶ್‌, ಭೀಮಪ್ಪ ಬೆಂಕಿ ನಂದಿಸಿ ಪರಿಸ್ಥಿತಿ ಹತೋಟಿಗೆ ತಂದಿರುತ್ತಾರೆ.























error: Content is protected !!
Scroll to Top