ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ವತಿಯಿಂದ ಮಾ. 3ರಂದು ಸಂಜೆ 6 ಗಂಟೆಗೆ ಗೊಮ್ಮಟಬೆಟ್ಟದಲ್ಲಿ ತ್ಯಾಗಮೂರ್ತಿ ಗೊಮ್ಮಟೇಶನಿಗೆ ಕಾವ್ಯಾಭಿಷೇಕ – ಕಾರ್ಕಳ ತಾಲೂಕಿನ ಕವಿ ಕವಯಿತ್ರಿಯರಿಂದ ಕವನ ವಾಚನ ಕಾರ್ಯಕ್ರಮ ನಡೆಯಲಿದೆ.
ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಯನ್ನಾಡಲಿದ್ದು, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಲಿರುವರು. ಜೈನ ಧರ್ಮ ಜೀರ್ಣೋದ್ಧಾರ ಸಂಘ ಕಾರ್ಕಳದ ಜೊತೆ ಕಾರ್ಯದರ್ಶಿ ಮೋಹನ್ ಪಡಿವಾಳ್, ರಂಗ ಸಂಸ್ಕೃತಿ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಕಾರ್ಕಳ ತಾಲೂಕು ಸಮ್ಮೇಳನಾಧ್ಯಕ್ಷ ಸಿದ್ಧಾಪುರ ವಾಸುದೇವ ಭಟ್ಟ ಉಪಸ್ಥಿತರಿರಲಿದ್ದು, ಹಿರಿಯ ಸಾಹಿತಿ ಜ್ಯೋತಿ ಗುರುಪ್ರಸಾದ್ ಸಮನ್ವಯಕಾರರಾಗಿ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















