ಟಿಪ್ಪರ್‌ – ಕಾರು ಚಾಲಕರ ನಡುವೆ ಗಲಾಟೆ, ಹಲ್ಲೆ : ದೂರು – ಪ್ರತಿದೂರು ದಾಖಲು

ಕಾರ್ಕಳ : ಟಿಪ್ಪರ್‌ ಮತ್ತು ಕಾರು ಚಾಲಕರ ನಡುವೆ ಗಲಾಟೆ ನಡೆದು ಹಲ್ಲೆ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾದ ಘಟೆನ ಫೆ. 17ರಂದು ನಡೆದಿದೆ.

ನಂದಳಿಕೆ ಗ್ರಾಮದ ಸುಧೀರ್‌ ಶೆಟ್ಟಿಯವರು ನೀಡಿದ ದೂರಿನಂತೆ, ಸುಧೀರ್‌ ಶೆಟ್ಟಿಯವರು ಮಂಜು ಎಂಬುವವರನ್ನು ನಂದಳಿಕೆಗೆ ಬಿಡಲು ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ 9:45 ಗಂಟೆಗೆ ಗೋಳಿಕಟ್ಟೆ ಎಂಬಲ್ಲಿ ಟಿಪ್ಪರ್‌ಗಳು ಹೋಗುತ್ತಿದ್ದು ಟಿಪ್ಪರ್‌ನ ಬದಿಯಲ್ಲಿ ಹೋಗುತ್ತಿರುವಾಗ ಮುಂದೆ ಹೋಗಲು ಜಾಗ ಇರದ ಕಾರಣ ಕಾರು ರಸ್ತೆ ಬದಿಗೆ ಹೋಗಿದ್ದನ್ನು ನೋಡಿ ಟಿಪ್ಪರ್ ಚಾಲಕನು ಟಿಪ್ಪರ್ ನಿಲ್ಲಿಸಿದ್ದಾನೆ. ಆಗ ಸುಧೀರ್‌ ಶೆಟ್ಟಿಯವರು ಟಿಪ್ಪರ್ ಚಾಲಕನಲ್ಲಿ ಸೈಡ್ ಕೊಡಲು ಆಗುವುದಿಲ್ಲವಾ ಎಂದು ಕೇಳಿರುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಕಾರಿನಲ್ಲಿ ಆಪಾದಿತ ಆದರ್ಶ ಶೆಟ್ಟಿ ಮತ್ತು ಇತರ ಇಬ್ಬರು ಬಂದಿದ್ದು, ಆದರ್ಶ ಶೆಟ್ಟಿಯು ಸುಧೀರ್‌ ಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾನೆ. ಆ ವೇಳೆ ಅಲ್ಲಿಯೇ ಇದ್ದ ರಿತೇಶ ಶೆಟ್ಟಿ ಎಂಬುವವರು ತಡೆಯಲು ಬಂದಾಗ ಅವರ ಮೇಲೂ ಹಲ್ಲೆ ಮಾಡಿರುತ್ತಾನೆ. ನಂತರ 2 ಕಾರುಗಳಲ್ಲಿ 10 ಜನರನ್ನು ಕರೆಸಿ ಆಪಾದಿತರು ಸುಧೀರ್‌ ಶೆಟ್ಟಿ ಮತ್ತು ರಿತೇಶ ಶೆಟ್ಟಿಯವರಿಗೆ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುತ್ತಾರೆ. ಗಾಯಗೊಂಡಿದ್ದ ಸುಧೀರ್‌ ಶೆಟ್ಟಿ ಅವರಿಗೆ ನೋವು ಜಾಸ್ತಿಯಾದ ಕಾರಣ ಚಿಕಿತ್ಸೆಗಾಗಿ ಫೆ. 18ರಂದು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂದು ಪ್ರಕರಣ ದಾಖಲಾಗಿರುತ್ತದೆ.

ಬೆಳ್ಮಣ್‌ ಗ್ರಾಮದ ರಾಹುಲ್ ಟೆರೆನ್ಸ್ ಐಜು ನೀಡಿದ ದೂರಿನಂತೆ, ಅವರು ನಂದಳಿಕೆ ಜಾಯ್ ಕ್ರಷರ್‌ನಿಂದ ಟಿಪ್ಪರ್‌ನಲ್ಲಿ ಚಾಲಕನಾಗಿ ಜಲ್ಲಿ ಲೋಡ್ ಮಾಡಿಕೊಂಡು ಹಾಗೂ ಇನ್ನೊಂದು ಟಿಪ್ಪರ್‌ನಲ್ಲಿ ನಿಟ್ಟೆಯ ಆದರ್ಶ ಶೆಟ್ಟಿ ಚಾಲಕನಾಗಿ ಶಾಂತ ಕುಮಾರ್ ಎಂಬುವವರನ್ನು ಕ್ಲೀನರ್ ಆಗಿ ಕುಳ್ಳಿರಿಸಿಕೊಂಡು ಕೇರಳಕ್ಕೆ ಹೋಗಲು ಬೆಳ್ಮಣ್ ಕಡೆಗೆ ಬರುತ್ತಿದ್ದಾಗ ರಾತ್ರಿ 10 ಗಂಟೆಗೆ ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ತಲುಪುವಾಗ ಕಾರಿನಲ್ಲಿ ಬರುತ್ತಿದ್ದ ಆಪಾದಿತರಾದ ಸುಧೀರ್ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ಎಂಬುವವರು ಟಿಪ್ಪರ್‌ಗಳನ್ನು ಓವರ್ ಟೇಕ್ ಮಾಡಿಕೊಂಡು ಬಂದು ರಾಹುಲ್ ಟೆರೆನ್ಸ್ ಐಜು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಕಾರಿಗೆ ಯಾಕೆ ಸೈಡ್ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ರಾಹುಲ್ ಟೆರೆನ್ಸ್ ಐಜು, ಆದರ್ಶ ಶೆಟ್ಟಿ ಮತ್ತು ಶಾಂತ ಕುಮಾರ್ ಅವರನ್ನು ಟಿಪ್ಪರ್ ಗಳಿಂದ ಕೆಳಗೆ ಎಳೆದು ಹಲ್ಲೆ ಮಾಡಿದ್ದಾರೆ. ಈ ವೇಳೆ ಮೂವರು ಅಲ್ಲಿಂದ ಓಡಿ ಹೋಗಿ ಆಪಾದಿತರು ಸ್ಥಳದಿಂದ ಹೋದ ನಂತರ ಬಂದು ಟಿಪ್ಪರ್ ತೆಗೆದುಕೊಂಡು ಹೋಗಿದ್ದಾರೆ. ಗಾಯಾಳುಗಳು ಫೆ. 18ರಂದು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿ ಪ್ರಕರಣ ದಾಖಲಾಗಿರುತ್ತದೆ.











































error: Content is protected !!
Scroll to Top