ಭಾರತ್‌ ಜೋಡೋ ಕ್ರಿಕೆಟ್‌ ಟ್ರೋಫಿ – ಮಹಾಲಿಂಗೇಶ್ವರ ತಂಡ ಪ್ರಥಮ

ಕಾರ್ಕಳ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಯೋಜನೆಯಲ್ಲಿ ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ ಎನ್‌ಎಸ್‌ಯುಐ ಸಹಯೋಗದೊಂದಿಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆದ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ ಕಾರ್ಕಳ – 2026 ಸಮಾಪ್ತಿಗೊಂಡಿತು. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಸಾರಥ್ಯದಲ್ಲಿ ಜ. 30ರಿಂದ ಮೂರು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ, ಅದ್ಧೂರಿಯಾಗಿ ಕ್ರೀಡಾಕೂಟ ಜರುಗಿತು. ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ, ಮಂಗಳೂರಿನ ಗೋರಿ ಯಂಗ್ ಬಾಯ್ಸ್ ತಂಡವು ರನ್ನರ್-ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಪ್ರದರ್ಶನ ಪಂದ್ಯಾಟದಲ್ಲಿ ಟೀಂ ಎಎಫ್‌ ತಂಡದ ವಿರುದ್ಧ ಫ್ರೆಂಡ್ಸ್‌ ಕಾರ್ಕಳ ತಂಡ ಜಯ ಗಳಿಸಿತು.

ಸನ್ಮಾನ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಪಿನ್ ಚಂದ್ರಪಾಲ್ ನಕ್ರೆ, ಪುರಸಭಾ ಮಾಜಿ ಸದಸ್ಯರಾದ ಸೀತಾರಾಮ, ಕ್ರಿಕೆಟ್‌ ಅಸೋಸಿಯೇಶನ್‌ ಗೌರವಾಧ್ಯಕ್ಷ ಅವಿನಾಶ್ ಶೆಟ್ಟಿ, ಅಂತಾರಾಷ್ಟ್ರೀಯ ಮುಕ್ತ ಟೇಕ್‌ವಾಂಡೋ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ವಿಜೇತ ಪವನ್, ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ನೋಅ ಜೋ ಪಾಯಿಸ್ ಹಾಗೂ ಕಾರ್ಕಳದ ಹಿರಿಯ ಆಟಗಾರರಾದ ಸತೀಶ್ ಆಚಾರ್ಯ (ವೆಸ್ಟರ್ನ್ ಕ್ರಿಕೆಟರ್ಸ್) ಗಫೂರ್ (ಬ್ರದರ್ಸ್ ಅಜೆಕಾರ್) ಸುರೇಶ್ ದೇವಾಡಿಗ (ನ್ಯೂಸ್ಟರ್ ಕ್ರಿಕೆಟರ್ಸ್) ಶರತ್ ಅಂಚನ್ (ಮಹಾಲಿಂಗೇಶ್ವರ ತಂಡ) ಮೊದಲಾದವರನ್ನು ಗೌರವಿಸಲಾಯಿತು.















error: Content is protected !!
Scroll to Top