ಕನ್ನಡ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಕಳ ಘಟಕದ ಅಧ್ಯಕ್ಷರಾಗಿ ಸುಶಾಂತ್‌ ಬಜಗೋಳಿ

ಉಡುಪಿ : ಕನ್ನಡ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಕಳ ಘಟಕದ ಅಧ್ಯಕ್ಷರಾಗಿ ಉದ್ಯಮಿ ಸುಶಾಂತ್‌ ಬಜಗೋಳಿ ಆಯ್ಕೆಯಾಗಿದ್ದಾರೆ. ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿರುವ ಸುಶಾಂತ್‌ ಅವರು ಈ ಹಿಂದೆ ಅಬ್ಬೆಂಜಾಲು ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷರಾಗಿ, ಬಜಗೋಳಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಎಸ್‌ಕೆಪಿಎ ಕಾರ್ಕಳ ವಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಸರಕಾರಿ ಶಾಲಾ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಸಮಿತಿ ರಚನೆಯಾಗಿದ್ದು ಅಭಿಯಾನ ಕೈಗೊಳ್ಳಲಿದೆ. ಫೆ. 11ರಂದು ಮಂಗಳೂರು ಪುರಭವನದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ವಾಸುದೇವ ರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















































































































































































error: Content is protected !!
Scroll to Top