ಸದನದಲ್ಲಿ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

ಬೆಂಗಳೂರು : ವಿಧಾನ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ರೊಚ್ಚಿಗೆದ್ದು, ಬಿಜೆಪಿಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶಗೊಂಡ ಶಿವಲಿಂಗೇಗೌಡ ಬಿಜೆಪಿ ಸದಸ್ಯ ಶರಣು ಸಲಗಾರ್ ಸೇರಿದಂತೆ ಇತರರ ವಿರುದ್ಧ ವಾಗ್ದಳಿ ನಡೆಸಿದರು.

ಅಬಕಾರಿ ಹಗರಣದ ಬಗ್ಗೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಠಿಣ ಪದಗಳನ್ನು ಬಳಸಿ ಶಿವಲಿಂಗೇಗೌಡ ಅವರು ವಾಗ್ದಾಳಿ ನಡೆಸಿದರು.

ಇಂತಹ ಕೆಟ್ಟ ವಿಪಕ್ಷ ನಾನು ನೋಡಿಲ್ಲ. ಇವರನ್ನು ಕೂಡಲೇ ಹೊರಗೆ ಹಾಕಿ. ನನ್ನ ವಿರುದ್ಧ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಕೆಟ್ಟ ವರ್ತನೆ ಎಂದು ತರಾಟೆಗೆ ತೆಗೆದುಕೊಂಡರು. ಮಿಮಿಕ್ರಿ ಮಾಡಿಸ್ತಿದ್ದೀರಾ, ಮಾನ ಮರ್ಯಾದೆ ಇಲ್ವಾ? ಕೋತಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೀಗೆ ಕೂಗಿ ಕೂಗಿ ಆರ್‌ಎಸ್ಎಸ್ ಹಾಳು ಮಾಡಿದ್ದು ಎಂದು ವಾಗ್ದಾಳಿ ನಡೆಸಿದರು.

ಕೊಬ್ಬರಿ ಬಗ್ಗೆ ಯಾರು ಹೋರಾಟ ಮಾಡಿದ್ದರು ಎಂದು ಅರಸೀಕೆರೆ ಹೋಗಿ ಕೇಳು ಎಂದು ಶರಣು ಸಲಗಾರ್ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ನಾವೂ ಧರಣಿ ಮಾಡಿದ್ದೇವೆ. ಹೀಗಾ ಧರಣಿ ಮಾಡುವುದು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಮಾತನಾಡಿ ಎಂದು ಕಿಡಿಕಾರಿದರು.

ಶರಣು ಸಲಗಾರ್ ಹೆಂಡತಿ ತಹಶಿಲ್ದಾರ್ ಆಗಿದ್ದಾರೆ, ಅವರ ಮೂಲಕ ದುಡ್ಡು ಹೊಡೆದಿದ್ದಿ. ಯೋಗ್ಯತೆಗೆ … ಎಂದೆಲ್ಲಾ ಪದಗಳನ್ನು ಬಳಕೆ ಮಾಡಿ ಬಿಜೆಪಿ ಸದಸ್ಯರ ವಿರುದ್ಧ ಕಿಡಿಕಾರಿದ ಅವರು ವೈಯಕ್ತಿಕವಾಗಿ ಟಾರ್ಗೆಟ್ ಮಾಡ್ತಿದ್ದೀರಲ್ಲ, ವಿರೋಧ ಪಕ್ಷಕ್ಕೆ ನಾಲಾಯಕ್. ಕೆಟ್ಟ ಆರ್‌ಎಸ್ಎಸ್‌ ನವರಿಗೆ ನಾನು ವಿಚಲಿತನಾಗಲ್ಲ. ಇನ್ನು ನಿಮ್ಮ ಜೀವನದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ಕ್ಷಮೆಗೆ ಬಿಜೆಪಿ ಆಗ್ರಹ
ಶಿವಲಿಂಗೇಗೌಡರು ಏಕವಚನದಲ್ಲಿ ಆರೋಪ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಪಕ್ಷದ ಸದಸ್ಯರು ಒತ್ತಾಯಿಸಿದರು.









































































































error: Content is protected !!
Scroll to Top